ಡಿಸೆಂಬರ್ 13ರೊಳಗೆ ಸಂಸತ್ ಭವನದ ಮೇಲೆ ದಾಳಿ; ಖಲಿಸ್ತಾನಿ ಉಗ್ರನಿಂದ ಎಚ್ಚರಿಕೆ!
ನವದೆಹಲಿ; ಡಿಸೆಂಬರ್ 13ಕ್ಕೆ ಸಂಸತ್ ಭವನದ ಮೇಲೆ ದಾಳಿ ನಡೆದು 22 ವರ್ಷ ಆಗಲಿದೆ. ಈ ನಡುವೆಯೇ ಸಂಸತ್ ಭವನಕ್ಕೆ ಮತ್ತೊಂದು ಬೆದರಿಕೆ ಬಂದಿದೆ. ಡಿಸೆಂಬರ್ 13 ರೊಳಗೆ ಸಂಸತ್ ಭಾವನದ ಮೇಲೆ ದಾಳಿ ಮಾಡುತ್ತೇವೆ ಅಂತ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪೆನ್ನುನ್ ಎಚ್ಚರಿಕೆ ಕೊಟ್ಟಿದ್ದಾನೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ.
2021ರ ಡಿಸೆಂಬರ್ 13ರಂದು ಪಾರ್ಲಿಮೆಂಟ್ ಮೇಲೆ ದಾಳಿ ನಡೆದಿತ್ತು. ಆ ಪ್ರಕರಣದ ಅಪರಾಧಿ ಅಫ್ಜಲ್ ಗುರು ಜೊತೆಗಿನ ಪೋಸ್ಟರ್ ಜೊತೆ ಉಗ್ರ ಗುರುಪತ್ವಂತ್ ಸಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ದೆಹಲಿಯನ್ನು ಖಲಿಸ್ತಾನವನ್ನಾಗಿ ಬದಲಾಯಿಸಲಾಗುತ್ತದೆ ಎಂದೂ ಎಚ್ಚರಿಕೆ ಕೊಟ್ಟಿದ್ದಾನೆ.
ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಸಂಸತ್ ಭವನಕ್ಕೆ ಸೆಕ್ಯೂರಿಟ್ ಟೈಟ್ ಮಾಡಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಕೂಡಾ ಅಲರ್ಟ್ ಆಗಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಐಎಸ್ಐ, ಭಾರತ ವಿರುದ್ಧ ಪ್ರಚಾರ ಮಾಡಲು ಖಲಿಸ್ತಾನಿ ಉಗ್ರನಿಗೆ ಸೂಚನೆಗಳನ್ನು ನೀಡುತ್ತಿದೆ ಎನ್ನಲಾಗಿದೆ.
ಅಂದಹಾಗೆ ಪಾರ್ಲಿಮೆಂಟ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಡಿಸೆಂಬರ್ 22ರಂದು ಮುಗಿಯಲಿದೆ. ಅಧಿವೇಶನ ಸಂದರ್ಭದಲ್ಲಿ ದಾಳಿ ಎಚ್ಚರಿಕೆ ನೀಡಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.