CrimePolitics

ಸಹೋದರ ಪ್ರಜ್ವಲ್ ರೇವಣ್ಣ ಗೆದ್ದೇ ಗೆಲ್ತಾರೆ; ಸೂರಜ್ ರೇವಣ್ಣ

ಹಾಸನ; ಹಾಸನ ಲೋಕಸಭಾ ಕ್ಷೇತ್ರದಲ್ಲಿ ನನ್ನ ಸಹೋದರ ಪ್ರಜ್ವಲ್ ರೇವಣ್ಣ ಗೆದ್ದೇ ಗೆಲ್ತಾರೆ ಎಂದ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.. ಪ್ರಜ್ವಲ್ ವಿರುದ್ದದ ಪ್ರಕರಣದ ನಂತರ ಸೂರಜ್ ರೇವಣ್ಣ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ..

  ಹಾಸನದಲ್ಲಿ ಮಾತನಾಡಿದ ಸೂರಜ್, ಹಾಸನ ಜಿಲ್ಲೆಯಲ್ಲಿ ನನ್ನ ತಂದೆ ರೇವಣ್ಣ ಅವರು ಒಳ್ಳೆ ಹೆಸರು ಗಳಿಸಿದ್ದಾರೆ.. ಇಲ್ಲಿ ಅವರನ್ನು ಎದುರಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ.. ಈ ಕಾರಣಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ತಂದೆಯ ವಿರುದ್ಧ ಸಾವಿರ ಎಫ್ ಐಆರ್ ದಾಖಲಾಗಲಿ ತೊಂದರೆ ಇಲ್ಲ. ಸತ್ಯ ಗೊತ್ತಾಗುತ್ತದೆ ಎಂದು ಸೂರಜ್ ಹೇಳಿದ್ದಾರೆ..

  ಪ್ರಜ್ವಲ್ ಯಾವಾಗ ಬರುತ್ತಾರೋ ಗೊತ್ತಿಲ್ಲ.. ಆದ್ರೆ ಇದರ ಷಡ್ಯಂತ್ರ ಇದೆ.. ಆದರೂ ಚುನಾವಣೆಯಲ್ಲಿ ನಾವೇ ಗೆಲ್ಲೋದು.. ಈ ಪ್ರಕರಣದಿಂದ ನಮ್ಮ ಕಾರ್ಯಕರ್ತರು ಎದೆಗುಂದಿಲ್ಲ. ನಾವಹ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಸೂರಜ್ ಇದೇ ವೇಳೆ ಹೇಳಿದ್ದಾರೆ.

Share Post