CrimeNational

ನ್ಯಾಷನಲ್‌ ಹೆರಾಲ್ಡ್‌ ಕೇಸ್‌; ಇಡಿ ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆ

ನವದೆಹಲಿ; ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಈಗಾಗಲೇ ಸೋನಿಯಾ ನಿವಾಸಕ್ಕೆ  ಪುತ್ರಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಸೋನಿಯಾಗಾಂಧಿಯವರು ಇಡಿ ಕಚೇರಿಗೆ ಹೊರಡಲಿದ್ದಾರೆ.

ಕಳೆದ ತಿಂಗಳು ರಾಹುಲ್ ಗಾಂಧಿ 5 ದಿನಗಳ ವಿಚಾರಣೆ ಎದುರಿಸಿದ್ದರು. ಸೋನಿಯಾಗಾಂಧಿ ಅವರಿಗೂ ವಿಚಾರಣೆ ಬರುವಂತೆ 2 ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಕೋವಿಡ್ ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಸೋನಿಯಾ ವಿನಾಯಿತಿ ಕೋರಿದ್ದರು.  ಇದಕ್ಕೆ ಸಹಕರಿಸಿದ್ದ ಇಡಿ ಅಧಿಕಾರಿಗಳು ಇಂದು ಹಾಜರಾಗುವಂತೆ ಸಮನ್ಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋನಿಯಾ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಇನ್ನು ರಾಹುಲ್‌ ಗಾಂಧಿ ವಿಚಾರಣೆ ಎದುರಿಸಿದ ಐದೂ ದಿನಗಳಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೀಗ ಅದೇ ರೀತಿಯ ಹೈಡ್ರಾಮಾ ಇವತ್ತೂ ಕೂಡಾ ನಡೆಯಲಿದೆ. ಸಂಸತ್ತಿನಲ್ಲೂ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Share Post