ನ್ಯಾಷನಲ್ ಹೆರಾಲ್ಡ್ ಕೇಸ್; ವಿಚಾರಣೆಗೆ ಹಾಜರಾದ ಸೋನಿಯಾಗಾಂಧಿ
ನವದೆಹಲಿ; ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಒಂಭತ್ತು ಗಂಟೆ ವಿಚಾರಣೆ ಎದುರಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಮತ್ತೆ ಇಡಿ ಮುಂದೆ ಹಾಜರಾಗಿದ್ದಾರೆ. ನಿನ್ನೆ ಬೆಳಗ್ಗೆ ಹಾಗೂ ಮಧ್ಯಾಹ್ನ ಸೇರಿ ಒಟ್ಟು ಆರು ಗಂಟೆ ವಿಚಾರಣೆ ಎದುರಿಸಿದ್ದ ಸೋನಿಯಾಗೆ ಇಂದೂ ಕೂಡಾ ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋನಿಯಾ ಇವತ್ತೂ ವಿಚಾರಣೆಗೆ ಸಹಕರಿಸುತ್ತಿದ್ದಾರೆ.
ಇಂದು ಬೆಳಗ್ಗೆ 11ರ ಸುಮಾರಿಗೆ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸೋನಿಯಾ, ದೆಹಲಿಯ ಇ.ಡಿ. ಕಚೇರಿಗೆ ಆಗಮಿಸಿದರು. ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಸೋನಿಯಾ ವಿಚಾರಣೆ ನಡೆಸಲಾಗುತ್ತಿದೆ. ಜುಲೈ 21ರಂದು ಕೂಡಾ ಸೋನಿಯಾ ವಿಚಾರಣೆ ನಡೆಸಲಾಗಿತ್ತು. ಅಂದು ಮೂರು ಗಂಟೆಗಳ ಕಾಲ ಸೋನಿಯಾಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.