Crime

ವಾಟ್ಸಾಪ್‌ನಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಲೀಕ್‌; ಆರೋಪಿ ಅರೆಸ್ಟ್‌

ಮುಂಬೈ: 12 ನೇ ತರಗತಿ ಪರೀಕ್ಷೆಯ ಕೆಮಿಸ್ಟ್ರಿ ಪಶ್ನೆಪತ್ರಿಕೆಯನ್ನು ಲೀಕ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಕೋಚಿಂಗ್‌ ಸೆಂಟರ್‌ ಮಾಲೀಕನೊಬ್ಬನನ್ನು ಬಂಧಿಸಿದ್ದಾರೆ. ಮುಖೇಶ್‌ ಧನ್‌ಸಿಂಗ್‌ ಎಂಬಾತನೇ ಬಂಧಿತ ಆರೋಪಿ. ಈತ ಮುಂಬೈನ ಮಲಾಡ್‌ ಪ್ರಾಂತ್ಯದಲ್ಲಿ ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದನೆಂದು ತಿಳಿದುಬಂದಿದೆ.

ಆರೋಪಿ ಮುಖೇಶ್‌ ಧನ್‌ಸಿಂಗ್‌, ಪರೀಕ್ಷೆ ಶುರುವಾಗುವುದಕ್ಕೂ ಕೆಲ ಗಂಟೆಗಳ ಮೊದಲು ವಾಟ್ಸಾಪ್‌ ಮೂಲಕ ಪ್ರಶ್ನೆಪತ್ರಿಕೆಯನ್ನು ಹರಿಬಿಟ್ಟಿದ್ದ. ಈ ವಿಚಾರದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ವೈರಲ್‌ ಆಗಿತ್ತು. ಇದರ ಹಿಂದೆ ಬಿದ್ದ ಮುಂಬೈ ಪೊಲೀಸರು, ಪ್ರಶ್ನೆಪತ್ರಿಕೆ ಲೀಕ್‌ ಮಾಡಿದ್ದ ಮುಖೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post