CrimeDistricts

ಭೀಮಾ ತೀರದಲ್ಲಿ ಮತ್ತೊಂದು ಕೊಲೆ; ಯುವಕನ ಭೀಕರ ಹತ್ಯೆ

ಕಲಬುರಗಿ; ಭೀಮಾ ತೀರದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತ್‌ ಸದಸ್ಯನೊಬ್ಬನ ಹತ್ಯೆಯಾಗಿತ್ತು. ಇದಾದ ಮೇಲೆ ಮತ್ತೊಂದು ಕೊಲೆಯಾಗಿದೆ. ಅಫಜಲಪುರ ತಾಲ್ಲೂಕಿನ ಸಿಧನೂರ ಗ್ರಾಮದಲ್ಲಿ ಯುವಕೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

23 ವರ್ಷದ ಬಲಭೀಮ ಸಗರ ಎಂಬಾತನೇ ಕೊಲೆಯಾದ ಯುವಕ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಗುಂಪು, ಅಲ್ಲಿಂದ ಪರಾರಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

 

Share Post