CrimeNational

ಬಾಲಕಿಯರ ಮುಂದೆ ಅಸಭ್ಯ ವರ್ತನೆ; ಮಲಯಾಳಂ ನಟ ಶ್ರೀಜಿತ್‌ ರವಿ ಅರೆಸ್ಟ್‌

ತಿರುವನಂತಪುರ; ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನೆಂಬ ಆರೋಪದ ಮೇಲೆ ಮಲಯಾಳಂ ನಟ ಶ್ರೀಜಿತ್‌ ರವಿ ಎಂಬುವವರನ್ನು ತ್ರಿಶೂರ್‌ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೂ ಕೂಡಾ ಈತನನ್ನು ಇದೇ ರೀತಿಯ ವರ್ತನೆಯ ಕಾರಣ ಬಂಧಿಸಲಾಗಿತ್ತೆಂದು ಹೇಳಲಾಗಿದೆ.

ಜುಲೈ 4ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ ನಟ ಶ್ರೀಜಿತ್‌ ರವಿ, ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ್ದನಂತೆ. ಈ ಬಾಲಕಿಯರ ಪೋಷಕರು ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ನಟ ಶ್ರೀಜಿತ್‌ನನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ, ಸಿಸಿಟಿವಿಯಲ್ಲಿ ಶ್ರೀಜಿತ್‌ ಅಸಭ್ಯ ವರ್ತನೆ ದಾಖಲಾಗಿದೆ ಎಂದು ತಿಳಿದುಬಂದಿದೆ.  2016ರಲ್ಲಿ ಕೂಡಾ ಪಾಲಕ್ಕಾಡ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ಶ್ರೀಜಿತ್‌ ರವಿಯನ್ನು ಬಂಧಿಸಿದ್ದರು.

Share Post