NationalPolitics

ಎಐಎಡಿಎಂಕೆ ನಾಯಕತ್ವ ವಿಚಾರ; ಕೋರ್ಟ್‌ನಲ್ಲಿ ಪಳನಿಸ್ವಾಮಿಗೆ ಹಿನ್ನಡೆ

ಚೆನ್ನೈ; ಎಐಎಡಿಎಂಕೆ ನಾಯಕತ್ವ ಸಂಬಂಧ ಜೂನ್‌ 23ರಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶ ಮಾಡಿದೆ. ಇದರಿಂದಾಗಿ ಒ.ಪನ್ನೀರ್‌ ಸೆಲ್ವಂ ಅವರ ಮುಖದಲ್ಲಿ ಗೆಲುವು ಮೂಡಿದ್ದು, ಪಳನಿಸ್ವಾಮಿಗೆ ಹಿನ್ನಡೆಯಾದಂತಾಗಿದೆ.

ಜುಲೈ 11ರಂದು ಎಐಎಡಿಎಂಕೆ ಸಾಮಾನ್ಯ ಸಭೆ ನಡೆದಿತ್ತು. ಇದರ ನಿರ್ಣಯಗಳನ್ನು ಅಮಾನ್ಯಗೊಳಿಸಿ ನ್ಯಾಯಮೂರ್ತಿ ಜಿ. ಜಯಚಂದ್ರನ್ ಆದೇಶ ಹೊರಡಿಸಿದ್ದಾರೆ. ಅಂದಿನ ಪಕ್ಷದ ಸಾಮಾನ್ಯ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆಪಾದನೆ ಮೇರೆಗೆ ಒ. ಪನ್ನೀರಸೆಲ್ವಂ (ಒಪಿಎಸ್) ಅವರನ್ನು ಉಚ್ಚಾಟಿಸಲಾಗಿತ್ತು. ಇಪಿಎಸ್ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿತ್ತು. ಇದರ ವಿರುದ್ಧ ಒ.ಪನ್ನೀರ್‌ ಸೆಲ್ವಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 3 ವಾರಗಳೊಳಗೆ ಆದೇಶ ನೀಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಸೂಚಿಸಿತ್ತು.

Share Post