ಬಾಲಕಿ ಜೊತೆ ಅಸಭ್ಯ ವರ್ತನೆ; ರೈಲ್ವೆ ನೌಕರನನ್ನು ಬಡಿದು ಕೊಂಡ ಪ್ರಯಾಣಿಕರು!
ಬಿಹಾರ; ರೈಲಿನಲ್ಲಿ ರೈಲ್ವೆ ನೌಕರನೊಬ್ಬ ಬಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.. ಇದನ್ನು ನೋಡಿ ಆಕ್ರೋಶಗೊಂಡ ಸಹಪ್ರಯಾಣಿಕರು ಬಾಲಕಿಯ ನೆರವಿಗೆ ಬಂದಿದ್ದು, ಆ ರೈಲ್ವೆ ನೌಕರನನ್ನು ಚೆನ್ನಾಗಿ ತದುಕಿದ್ದಾರೆ.. ಇದರಿಂದಾಗಿ ಆತ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.. ಬರೌನಿ ಇಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಲ್ಲಿ ಈ ಘಟನೆ ನಡೆದಿದೆ..
ಸಿವಾನ್ ನಲ್ಲಿ ವಾಸವಿರುವ ಕುಟುಂಬವೊಂದು ಹಮ್ಸಫರ್ ರೈಲಿನ 3 ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು.. ಅದೇ ಕೋಚ್‌ನಲ್ಲಿದ್ದ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಎಂಬಾತ ಕೂಡಾ ಇದ್ದ.. ಈತ ಆ ಕುಟುಂಬದ 11 ವರ್ಷದ ಬಾಲಕಿಯನ್ನು ತನ್ನ ಸೀಟಿನಲ್ಲಿ ಕೂರಿಸಿಕೊಂಡಿದ್ದ.. ಈ ನಡುವೆ ಬಾಲಕಿಯ ತಾಯಿ ವಾಶ್‌ರೂಮ್‌ಗೆ ಹೋಗಿದ್ದಾಗ, ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ.. ಈ ವಿಚಾರವನ್ನು ಬಾಲಕಿ ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ.. ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಇತರ ಸಹ ಪ್ರಯಾಣಿಕರು ಆತನನ್ನು ಹಿಡಿದು ಚೆನ್ನಾಗಿ ಹಲ್ಲೆ ಮಾಡಿದ್ದಾರೆ.. ಮನಬಂದಂತೆ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..
ಮರುದಿನ ಬೆಳಗ್ಗೆ 4.30ಕ್ಕೆ ರೈಲು ಉತ್ತರ ಪ್ರದೇಶದ ಕಾನ್ಪುರ ಕೇಂದ್ರ ನಿಲ್ದಾಣಕ್ಕೆ ತಲುಪಿದ್ದು, ಅಲ್ಲಿ ಪ್ರಯಾಣಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.. ಆತ ಆ ವೇಳೆ ಪ್ರಜ್ಞೆ ತಪ್ಪಿದವನಂತೆ ಇದ್ದ.. ಆದ್ರೆ ಪೊಲೀಸರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ..