CrimeNational

ಕಾರಿನಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!; ಹೈದರಾಬಾದ್‌ನಲ್ಲಿ ನಡೆದಿದ್ದೇನು..?

ಹೈದರಾಬಾದ್‌; ಮತ್ತು ಬರುವ ಔಷಧಿ ನೀಡಿ ಮಹಿಳೆಯೊಬ್ಬರ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.. ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ತನ್ನ ಸಹಚರರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಜನಾರ್ದನ್‌ ಹಾಗೂ ಸಂಗಿರೆಡ್ಡಿ ಎಂಬುವವರನ್ನು ಬಂಧಿಸಲಾಗಿದೆ..

ಜಾಗದ ವಿಚಾರವಾಗಿ ಮಾತನಾಡಲು ನಾನು ಮಿಯಾಪುರಕ್ಕೆ ಹೋಗಿದ್ದೆ.. ಈ ವೇಳೆ ಇಬ್ಬರು ವ್ಯಕ್ತಿಗಳು ನನ್ನನ್ನು ಯಾದಗಿರಿಗುಟ್ಟಕ್ಕೆ ಕರೆದುಕೊಂಡು ಹೋಗಿದ್ದರು.. ರಾತ್ರಿ ಹಿಂತಿರುವಾಗ ನಿರ್ಮಾಣ ಹಂತದಲ್ಲಿರುವ ಕಟ್ಟದ ಬಳಿ ಕಾರನ್ನು ನಿಲ್ಲಿಸಿದರು.. ಕಾರು ಕೆಟ್ಟುಹೋಗಿದೆ ಎಂದು ಹೇಳಿದರು.. ಈ ವೇಳೆ ಅವರು ನನಗೆ ತಂಪು ಪಾನೀಯ ನೀಡಿದರು.. ಅದನ್ನು ಕುಡಿದ ನನಗೆ ಮತ್ತು ಬರುವ ರೀತಿ ಆಗಿತ್ತು.. ಇದೇ ವೇಳೆ ಇಬ್ಬರೂ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ..

ಅತ್ಯಾಚಾರದ ಬಳಿಕ ಅಕೆಯನ್ನು ಚೆನ್ನಾಗಿ ಥಳಿಸಿ ಮಿಯಾಪುರದ ಹಾಸ್ಟೆಲ್‌ ಬಳಿ ಬಿಟ್ಟು ಪರಾರಿಯಾದರು ಎಂದು ತಿಳಿದುಬಂದಿದೆ..

 

Share Post