CrimeNational

ಫ್ರಿಡ್ಜ್‌ ಡೋರ್‌ ತೆಗೆದಾಗ ವಿದ್ಯುತ್‌ ಸ್ಪರ್ಶ!; ತಾಯಿ-ಮಗಳ ದಾರುಣ ಸಾವು!

ಫ್ರಿಡ್ಜ್‌ ಮುಟ್ಟೋ ಮುನ್ನ ಒಮ್ಮೆ ಯೋಚನೆ ಮಾಡಿ.. ಫ್ರಿಡ್ಜ್‌ ನಲ್ಲಿ ವಿದ್ಯುತ್‌ ಹರಿಯುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.. ಯಾಕಂದ್ರೆ, ಉತ್ತರ ಪ್ರದೇಶದಲ್ಲಿ ಫ್ರಿಡ್ಜ್‌ ಡೋರ್‌ ತೆಗೆಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಮಹಿಳೆ ಹಾಗೂ ಆಕೆಯ ಮಗಳು ಸಾವನ್ನಪ್ಪಿದ್ದಾರೆ.. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ..

55 ವರ್ಷದ ಶೈದಾ ಅವರು ಫ್ರಿಡ್ಜ್‌ನಿಂದ ಮಾವಿನ ಹಣ್ಣು ತೆಗೆಯಲು ಹೋದಾಗ ವಿದ್ಯುತ್‌ ಶಾಕ್‌ ಹೊಡೆದಿದೆ.. ಇದನ್ನು ನೋಡಿ ರಕ್ಷಿಸಲು ಬಂದ ಮಗಳಿಗೂ ವಿದ್ಯುತ್‌ ಸ್ಪರ್ಶವಾಗಿದೆ.. ಇದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಶೈದಾ ಹಾಗೂ ಆಕೆಯ ಮಗಳು ಅಫ್ಸನಾ ಕಾತೂನ್‌ ಎಂಬಾಕೆಯೇ ಸಾವನ್ನಪ್ಪಿದವರು..

 

Share Post