CrimeDistricts

ಕೂಗಾಡಬೇಡಿ ಎಂದಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿ ಮರ್ಡರ್

ಯಾದಗಿರಿ; ಬಾರ್ ನಲ್ಲಿ ಕುಡಿದು ಕೂಗಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಯನ್ನು ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ..

  ಜೂನ್ 5 ರಂದು ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಮಹೇಶ್ ಕನಕಟ್ಟಿ ಎಂಬುವವರೇ ಕೊಲೆಯಾದ ಅಧಿಕಾರಿಯಾಗಿದ್ದಾರೆ.. ಐವರ ಗುಂಪು ಈ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ..

 ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಬಡಿಗೆಯಿಂದ ಬಡಿದು, ಚನ್ನಾಗಿ ಒದ್ದು ಕೊಲೆ ಮಾಡಲಾಗಿದೆ. ಮೋಟಗಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ.

  ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ..

 

Share Post