CrimeNational

ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ; ನಾಲ್ವರ ಸಾವು!

ಚೆನ್ನೈ; ಪಟಾಕಿ ತಯಾರಿಕಾ ಘಟಕದಲ್ಲಿ ಭಯಾನಕ ಸ್ಫೋಟ ಸಂಭವಿಸಿದೆ.. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.. ತಮಿಳುನಾಡಿನ ವಿರುದುನಗರದ ಸತ್ತೂರಿನಲ್ಲಿ ನಡೆದಿದೆ..

ಸತ್ತೂರು ನಗರದಲ್ಲಿರುವ ಖಾಸಗಿ ಒಡೆತನದ ಪಟಾಕಿ ತಯಾರಿಕಾ ಘಟಕದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಸಾಯನಿಕಗಳನ್ನು ಬೆರೆಸಿದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ವಿರುದುನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಫೋಟವಾಗುತ್ತಿದ್ದಂತೆ ಬೆಂಕಿಯು ಭಾರೀ ಮಟ್ಟದಲ್ಲಿ ವ್ಯಾಪಿಸಿಕೊಂಡಿತ್ತು. ಬ್ಲಾಸ್ಟ್​ ಆದ ರಭಸಕ್ಕೆ ಕಾರ್ಖಾನೆಯ ಒಂದು ಭಾಗದ ಕಟ್ಟಡವೂ ಸಂಪೂರ್ಣ ಕುಸಿದಿದೆ. ಅಕ್ಕಪಕ್ಕದ ಬಿಲ್ಡಿಂಗ್​ಗಳು ಹಾನಿಗೊಳಗಾಗಿವೆ.

Share Post