ತೆಂಗಿನಕಾಯಿ ದೋಸೆ ರೆಸಿಪಿ ಒಮ್ಮೆ ಮಾಡಿ ನೋಡಿ
ಮಹಿಳೆಯರಿಗೆ ದಿನನಿತ್ಯ ಬೆಳಗ್ಗೆ ಎದ್ದು ತಕ್ಷಣ ಏನು ತಿಂಡಿ ಮಾಡಬೇಕು ಅಂತಾ ಗೊತ್ತಾಗುವುದಿಲ್ವ? ಹಾಗಾದರೆ ಅಂತವರಿಗೆ ಇಲ್ಲೊಂದು ತೆಂಗಿನಕಾಯಿ ದೋಸೆ ಸುಲಭವಾಗಿ ರೆಸಿಪಿ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ- 2 ಬಟ್ಟಲು
ಮೆಂತ್ಯೆ- 1 ಚಮಚ
ತೆಂಗಿನ ಕಾಯಿ ತುರಿ- 1 ಬಟ್ಟಲು
ಅವಲಕ್ಕಿ- 1 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ…
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಾಗೂ ಮೆಂತ್ಯೆಯನ್ನು ಹಾಕಿ 4 ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಿ.
ಹಿಟ್ಟು ರುಬ್ಬಿಕೊಳ್ಳಲು ಸ್ವಲ್ಪ ಸಮಯವಿರುವಾಗಲೇ ಅವಲಕ್ಕಿಯನ್ನು ನೆನೆಸಿಟ್ಟುಕೊಳ್ಳಿ.
ಮಿಕ್ಸಿ ಜಾರ್’ಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 8 ಗಂಟೆಗಳ ಕಾಲ ಮುಚ್ಚಿ ಫರ್ಮೆಂಟ್ ಆಗಲು ಇಡಿ.
8 ಗಂಟೆಗಳ ಫರ್ಮೆಂಟೇಶನ್ ನ ನಂತರ, ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಬಿಸಿ ತವಾ ಮೇಲೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಹಾಗೂ ಮೃದುವಾದ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.