CrimeNational

ಬೇರೆ ಮಹಿಳೆ ಜೊತೆ ಸಿಕ್ಕಿಬಿದ್ದ ಸಿನಿಮಾ ನಿರ್ಮಾಪಕ; ಪತ್ನಿಗೆ ಕಾರಿನಿಂದ ಗುದ್ದಿ ಎಸ್ಕೇಪ್‌ ಯತ್ನ

ಮುಂಬೈ; ಬಾಲಿವುಡ್‌ ಚಿತ್ರ ನಿರ್ಮಾಪಕ ಕಮಲ್‌ ಕಿಶೋರ್‌ ಮಿಶ್ರಾ ವಿರುದ್ಧ ಅವರ ಪ್ರತ್ನಿಯೇ ದೂರು ದಾಖಲಿಸಿದ್ದಾರೆ. ನನ್ನ ಪತಿ ನನಗೆ ಕಾರಿನಿಂದ ಗುದ್ದಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಅಕ್ಟೋಬರ್‌ 19ರಂದು ಸಬ್‌ ಅರ್ಬನ್‌ ಅಂಧೇರಿಯ ವಸತಿ ಕಟ್ಟಡದ ವಾಹನ ನಿಲುಗಡೆ ಪ್ರದೇಶದಲ್ಲಿ ನನ್ನ ಪತಿ ಕಾರಿನಲ್ಲಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡಿದ್ದರು. ಅದನ್ನು ನಾನು ಗಮನಿಸಿ ಅಲ್ಲಿಗೆ ಹೋದೆ. ಈ ವೇಳೆ ನನ್ನ ಪತಿ ಕಿಶೋರ್‌ ತಪ್ಪಿಸಿಕೊಳ್ಳಲು ಕಾರನ್ನು ಸ್ಪೀಡಾಗಿ ಓಡಿಸಿದ್ದಾರೆ. ಆಗ ಅಡ್ಡ ಬಂದ ನನಗೂ ಗುದ್ದಿದ್ದಾರೆ ಎಂದು ಕಿಶೋರ್‌ ಮಿತ್ರಾ ಪತ್ನಿ ದೂರಿದ್ದಾರೆ.

ನಿರ್ಮಾಪಕ ಕಿಶೋರ್‌ ಮಿಶ್ರಾ ವಿರುದ್ಧ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಶೋರ್‌ ಮಿಶ್ರಾ ದೆಹಾತಿ ಡಿಸ್ಕೊ ಎಂಬ ಹಿಂದಿ ಸಿನಿಮಾವನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ.

Share Post