CrimeInternational

ಮೊರಾಕೊದಲ್ಲಿ ಭೀಕರ ರಸ್ತೆ ಅಪಘಾತ; 24 ಮಂದಿ ದುರ್ಮರಣ

ಮೊರಾಕೊ; ಮೊರಾಕೊದಲ್ಲಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊರಾಕೊದ ಅಜಿಲಾಲ್‌ ಪ್ರಾಂತ್ಯದಲ್ಲಿ ಈ ದುರಂತ ನಡೆದಿದೆ. ಡೆಮ್ನೆಟ್‌ನ ಮಾರುಕಟ್ಟೆಗೆ ತೆರಳುತ್ತಿದ್ದಾಗ ಮಿನಿ ಬಸ್‌ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಇದರಿಂದಾಗಿ ಬಸ್‌ ಪಲ್ಟಿಯಾಗಿದೆ. ಬಸ್‌ ವೇಗವಾಗಿ ಚಲಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ದುರಂತ ನಡೆದಿದೆ.

Share Post