CrimeDistricts

ಕೌಟುಂಬಿಕ ಕಲಹ; ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ!

ತುಮಕೂರು;ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಮಧುಗಿರಿ ತಾಲೂಕು ಸಿದ್ದಾಪುರ ಕೆರೆಯಲ್ಲಿ ಈ ಘಟನೆ ನಡೆದಿದೆ..

ಹಸೀನಾ ತಾಜ್ (35), ಅಫೀಜ್ (8), ಅಲ್ಕೀಜ್ (4), ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡವರು.ಮಧುಗಿರಿ ತಾಲೂಕಿನ ಸಿದ್ದಪುರ ಕೆರೆಯಲ್ಲಿ ಘಟನೆ.

ಮಧುಗಿರಿ ಪಟ್ಟಣದಲ್ಲಿ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ಹಸೀನಾ ತಾಜ್,ಇಂದು ಮಧುಗಿರಿ ಬಳಿಯಿರುವ ಸಿದ್ದಪುರ ಕೆರೆಗೆ ತನ್ನ ಇಬ್ಬರು ಮಕ್ಕಳ ಜೊತೆ ಕೆರೆ ಬಿದ್ದು ಆತ್ಮಹತ್ಯೆ.

ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗ್ತಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ, ಪರಿಶೀಲನೆ.

ಘಟನೆ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Share Post