CrimeNational

ಸನ್ನಿ ಲಿಯೋನ್‌ ಭಾಗವಹಿಸಬೇಕಿದ್ದ ಸಮಾರಂಭ ಸ್ಥಳದಲ್ಲಿ ಸ್ಫೋಟ

ಇಂಫಾಲ್; ಮಣಿಪುರದ ಇಂಫಾಲ್‌ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಫ್ಯಾಶನ್ ಶೋ ಸ್ಥಳದ ಸಮೀಪ ಪ್ರಬಲ ಸ್ಪೋಟ ಸಂಭವಿಸಿದೆ. ಆದ್ರೆ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಇಂಫಾಲ್‌ನ ಹಟ್ಟ ಕಂಜೇಲ್‌ಬಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಸ್ಫೋಟ ನಡೆದಿದೆ. ನಾಳೆ ಇಲ್ಲಿ ಸಮಾರಂಭ ನಡೆಯಬೇಕಿತ್ತು. ಆದ್ರೆ ಇಂದು ಸ್ಫೋಟ ನಡೆದಿದೆ. ಸುಧಾರಿತ ಸ್ಫೋಟಕ ಅಥವಾ ಗ್ರೆನೇಡ್ ಬಳಸಿರಬಹುದು ಎಂದು ಶಂಕಿಸಲಾಗಿದೆ.

Share Post