ಸಂಚಾರ ನಿಯಮ ಉಲ್ಲಂಘನೆ; 50 ಪರ್ಸೆಂಟ್ ಆಫರ್ಗೆ ಒಳ್ಳೆ ರೆಸ್ಪಾನ್ಸ್
ಬೆಂಗಳೂರು; ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸಂಚಾರಿ ಪೊಲೀಸ್ ಇಲಾಖೆ ಬಂಪರ್ ಆಫರ್ ನೀಡಿದೆ. ಫೆ.11ರವರೆಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿದೆ. ಹೀಗಾಗಿ ಜನರು ಮುಗಿಬಿದ್ದು ದಂಡ ಪಾವತಿ ಮಾಡುತ್ತಿದ್ದಾರೆ. ಒಂದೇ ದಿನ ಐದು ಕೋಟಿ ರೂಪಾಯಿ ದಂಡ ವಸೂಲಾಗಿದೆ ಎಂದು ತಿಳಿದುಬಂದಿದೆ.
ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ
1. ಕರ್ನಾಟಕ ಓನ್ ವೆಬ್ಸೈಟ್ನಲ್ಲಿ ವಿವರಗಳನ್ನು ಪಡೆದುಪಾವತಿಸಬಹುದಾಗಿದೆ.
2. ಪೇ ಟಿಎಂ ಆ್ಯಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
3. ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿರುತ್ತದೆ. ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.
4. ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ. ಈ ನಿಯಮ 11-02-2023 ವರಗೆ ಮಾತ್ರ ಅನ್ವಯವಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.