CrimeNational

ಗಂಡನನ್ನು ಕೊಂದು ಹೃದಯಾಘಾತದ ನಾಟಕ; 3 ತಿಂಗಳ ನಂತ್ರ ಸಿಕ್ಕಿಬಿದ್ದ ಕೊಲೆಗಾತಿ!

ಹೈದರಾಬಾದ್; ಗಂಡನನ್ನು ಕೊಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದ ಮಹಿಳೆಯೊಬ್ಬಳು ಕೊನೆಗೂ ಸಿಕ್ಕಿಬಿದ್ದಿದ್ದಾಳೆ.. ಪ್ರಿಯಕರನ ಜೊತೆ ವಾಸಿಸುವುದಕ್ಕಾಗಿ ಗಂಡನನ್ನು ಕೊಲೆ ಮಾಡಿದ್ದ ಪತ್ನಿ, ನಾಟಕವಾಡಿ ಎಲ್ಲರಿಗೂ ಇದು ಸಹಜ ಸಾವು ಎಂದು ನಂಬಿಸಿದ್ದಳು.. ಇದನ್ನು ನಂಬಿದ ಸಂಬಂಧಿಕರು ಕೂಡಾ ಆ ವ್ಯಕ್ತಿಯ ಶವಸಂಸ್ಕಾರ ನಡೆಸಿ ಸುಮ್ಮನಾಗಿದ್ದರು.. ಆದ್ರೆ ಇದೀಗ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದು, 3 ತಿಂಗಳ ನಂತರ ವ್ಯಕ್ತಿ ಸಾವಿನ ರಹಸ್ಯ ಬಯಲಾಗಿದೆ..

3 ತಿಂಗಳ ಹಿಂದೆ ಹೈದರಾಬಾದ್‌ನ ಯೂಸಫ್‌ಗುಡಾದ ಮಧುರಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿತ್ತು..  ವಿಜಯಕುಮಾರ್ (40) ಎಂಬುವವರೇ ಕೊಲೆಯಾದ ವ್ಯಕ್ತಿ.. ಶ್ರೀಲಕ್ಷ್ಮಿ (33) ಎಂಬಾಕೆಯೇ ಕೊಲೆಗಾತಿ.. ಈ ದಂಪತಿ ಎಲ್ಲಾರೆಡ್ಡಿಗುಡೆಂನ ಜಯಪ್ರಕಾಶನಗರದಲ್ಲಿರುವ ಶಿಖರ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ..

ಇನ್ನು ಶ್ರೀಲಕ್ಷ್ಮೀಗೆ ಮದುವೆಗೆ ಮೊದಲೇ ಬೋರಬಂಡದ ರಾಜೇಶ್ (30) ಎಂಬಾತನ ಜೊತೆ ಲವ್ವ ಡವ್ವಿ ಇತ್ತಂತೆ.. ಮದುವೆಯ ನಂತರವೂ ವಿವಾಹೇತರ ಸಂಬಂಧ ಮುಂದುವರೆದಿದೆ.. ಇದು ಪತಿಗೆ ಗೊತ್ತಾದರೆ ಕಷ್ಟ ಎಂದು ಅರಿತ ಶ್ರೀಲಕ್ಷ್ಮೀ ಗಂಡನನ್ನು ಕೊಂದು ಪ್ರಿಯಕರನ ಜೊತೆ ವಾಸಿಸಲು ತೀರ್ಮಾನ ಮಾಡಿದ್ದಳು.. ಅದರಂತೆ ಪ್ರಿಯಕರನಿಗೂ ವಿಷಯ ತಿಳಿಸಿದ್ದಳು.

ಪತಿಯ ಹೆಸರಿನಲ್ಲಿ ಮೇಡ್ಚಲ್ ಮತ್ತು ಎಲ್ಲಾರೆಡ್ಡಿಗುಡೆಂನಲ್ಲಿ ಸ್ವಂತ ಮನೆಗಳಿವೆ. ಪತಿಯನ್ನು ಕೊಂದು ಆಸ್ತಿ ಮಾರಿ ದುಡ್ಡು ಅನುಭವಿಸಲು ಯೋಜನೆ ರೂಪಿಸಿದ್ದಳು. ಈ ವಿಷಯವನ್ನು ರಾಜೇಶನಿಗೆ ತಿಳಿಸಿ ಅವನನ್ನೂ ಒಪ್ಪಿಸಿದ್ದಳು. ಇದಕ್ಕಾಗಿ ರಾಜೇಶ್ ಸನತ್‌ ನಗರದ ರೌಡಿ ಶೀಟರ್ ಪಟೋಳ್ಳ ರಾಜೇಶ್ವರ್ ರೆಡ್ಡಿ (40) ನೆರವು ಕೋರಿದ್ದ. ರಾಜೇಶ್ವರ್ ರೆಡ್ಡಿ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳಿವೆ. ಎಲ್ಲರೆಡ್ಡಿಗುಡೆಂನಲ್ಲಿ ವಾಸವಿದ್ದ ಮನೆ ವಾಸ್ತು ಚೆನ್ನಾಗಿಲ್ಲ ಎಂದು ಶಿಖರ್ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಮಾಡುವ ಮೂಲಕ ಪತ್ನಿ ಸಂಚು ರೂಪಿಸಿದ್ದಲು. ಪತಿಯ ಹತ್ಯೆಗೆ ರಾಜೇಶ್ವರ್ ರೆಡ್ಡಿ ಮತ್ತು ಮಹಮ್ಮದ್ ಮೈತಾಬ್ ಅಲಿಯಾಸ್ ಬಬ್ಬನ್ ಅವರಿಗೆ  ಸುಪಾರಿ ನೀಡಲಾಗಿತ್ತು.

ಫೆಬ್ರವರಿ 1 ರಂದು ವಿಜಯಕುಮಾರ್ ತನ್ನ ಮಕ್ಕಳನ್ನು ಶಾಲೆಗೆ ಬಿಡಲು ಹೋಗಿದ್ದರು. ಬಳಿಕ ರಾಜೇಶ್, ರಾಜೇಶ್ವರ್ ರೆಡ್ಡಿ ಹಾಗೂ ಮೈತಾಬ್ ಅವರನ್ನು ಶ್ರೀಲಕ್ಷ್ಮಿ ಮನೆಗೆ ಕರೆಸಿಕೊಂಡು ಬಾತ್ ರೂಂನಲ್ಲಿ ಅಡಗಿಸಿಟ್ಟಿದ್ದಳು. ಮಕ್ಕಳನ್ನು ಶಾಲೆಯ ಬಳಿ ಇಳಿಸಿ ವಿಜಯ್ ಮನೆಗೆ ಬಂದಾಗ ಶ್ರೀಲಕ್ಷ್ಮಿ ಒಳಗಿನಿಂದ  ಬಡಿದಿದ್ದಾಳೆ. ಅನಂತ್ ಬಾತ್ ರೂಂ ಬಾಗಿಲು ತೆಗೆದಾಗ ಎಲ್ಲರೂ ಹೊರಬಂದು ಡಂಬಲ್ಸ್ ಮತ್ತು ಕಬ್ಬಿಣದ ಸರಳುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಂದಿದ್ದಾರೆ.. ನಂತರ ಮನೆಯಲ್ಲಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿ, ಮೃತದೇಹದ ಬಟ್ಟೆ ಬದಲಿಸಲಾಗಿದೆ..

ಹೃದಯಾಘಾತವಾಗಿ, ಗೋಡೆಗೆ ತಲೆ ಬಡಿದು ಪತಿ ಮೃತಪಟ್ಟಿದ್ದಾರೆ ಎಂದು ಪತ್ನಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ..  ಇದನ್ನು ನಿಜವೆಂದು ನಂಬಿದ ಕುಟುಂಬಸ್ಥರು ಮತ್ತು ಸಂಬಂಧಿಕರು ಅದೇ ದಿನ ಶ್ರೀನಗರ ಕಾಲೋನಿ ಸ್ಮಶಾನದಲ್ಲಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ..
ಈ ನಡುವೆ ಏನಾಯಿತೋ ಗೊತ್ತಿಲ್ಲ, ಆದರೆ ವಿಜಯ್ ಹತ್ಯೆಯ ನಂತರ ವಿಕಾರಾಬಾದ್ ಗೆ ಓಡಿ ಹೋಗಿದ್ದ ರಾಜೇಶ್ವರ್ ರೆಡ್ಡಿಗೆ ಪಶ್ಚಾತ್ತಾಪ ಶುರುವಾಗಿದೆ. ವಿಜಯ್‌ನನ್ನು ಹೊಡೆಯುವಾಗ, ಕೊಲ್ಲಬೇಡಿ ಕೊಲ್ಲಬೇಡಿ ಎಂದು ಬೇಡಿಕೊಂಡಿದ್ದನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಟ್ಟಿದ್ದಾನೆ.. ಇದರಿಂದ ಮನನೊಂದ ರಾಜೇಶ್ವರ್ ರೆಡ್ಡಿ ಗುರುವಾರ ಮಧುರಾನಗರ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ.

ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ರಾಜೇಶ್ವರ್ ರೆಡ್ಡಿ, ಶ್ರೀಲಕ್ಷ್ಮಿ, ರಾಜೇಶ್, ಮೈತಾಬ್ ಎಂಬುವವರನ್ನು ಬಂಧಿಸಿದ್ದಾರೆ. 302 ಮತ್ತು 201 ಸೆಕ್ಷನ್ ಅಡಿಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಈ ತಂದೆಯ ಮರಣ ಮತ್ತು ತಾಯಿಯ ಬಂಧನದಿಂದ ಮಕ್ಕಳಿಬ್ಬರೂ ಅನಾಥರಾದರು.

Share Post