CrimePolitics

ಮಾನನಷ್ಟ ಮೊಕದ್ದಮೆ; ಕೋರ್ಟ್‌ ಕಟಕಟೆಯಲ್ಲಿ ಸಿಎಂ, ಡಿಸಿಎಂ!

ಬೆಂಗಳೂರು; ವಿಧಾನಸಭಾ ಚುನಾವಣೆ ಸಮಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮೀಷನ್‌ ಸೇರಿ ಹಲವು ಆರೋಪ ಮಾಡಿದ್ದ ಪ್ರಕರಣದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಖುದ್ದು ಕೋರ್ಟ್‌ ಮುಂದೆ ಹಾಜರಾಗಲಿದ್ದಾರೆ.. ಬಿಜೆಪಿ ವಿರುದ್ಧದ ಈ ಗಂಭೀರ ಆರೋಪ ಪ್ರಕರಣದಲ್ಲಿ ಖಾಸಗಿ ಮಾನನಷ್ಟ ಪ್ರಕರಣ ದಾಖಲಾಗಿತ್ತು.. ಈ ಸಂಬಂಧ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿತ್ತು.. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಇಂದು ಕೋರ್ಟ್‌ಗೆ ಹಾಜರಾಗಲಿದ್ದಾರೆ..

ಸಿ.ಟಿ ಸಿವಿಲ್ ಕೋರ್ಟ್​ನ ನ್ಯಾಯಾಧೀಶರ ಮುಂದೆ ಈಗ ಸಿಎಂ ಹಾಗೂ ಡಿಸಿಎಂ ಇಬ್ಬರೂ ಹಾಜರಾಗಲಿದ್ದಾರೆ.. ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜಾಹೀರಾತುಗಳನ್ನು ಹಲವು ಗಂಭೀರ ಆರೋಪಗಳನ್ನು ಮಾಡಲಾಗಿತ್ತು.. ಸಿಎಂ ಹುದ್ದೆಗಾಗಿ 2500 ಕೋಟಿ, ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಹೈಕಮಾಂಡ್‌ ಗೆ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.. ಜೊತೆಗೆ ಕಾಮಗಾರಿಗಳ ಗುತ್ತಿಗೆಗೆ 40 ಪರ್ಸೆಂಟ್‌ ಕಮೀಷನ್‌ ಪಡೆದಿದ್ದಾರೆ ಎಂದು ಆರೋಪ ಮಾಡಲಾಗಿತ್ತು..

ಈ ಸಂಬಂಧ ಬಿಜೆಪಿ ಪ್ರಧಾನಕಾರ್ಯದರ್ಶಿ ಕೇಶವಪ್ರಸಾದ್, ಖಾಸಗಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದರು.. ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು..

 

Share Post