HealthNational

ಜೀವಂತ ಹಾವನ್ನ ಕಚ್ಚಿ ಕಚ್ಚಿ ತಿಂದ ವ್ಯಕ್ತಿ!; ಮಂದೇನಾಯ್ತು..?

ಲಕ್ನೋ; ವ್ಯಕ್ತಿಯೊಬ್ಬ ಜೀವಂತ ಹಾವನ್ನು ಹಿಡಿದು, ಅದನ್ನು ಕಚ್ಚಿ ಕಚ್ಚಿ ತಿಂದಿದ್ದಾನೆ.. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಫತೇಪುರದ ಕಲ್ಕಾ ಕ್ಯಾಂಪ್‌ ಬಳಿ ನಡೆದಿದೆ..

55 ವರ್ಷದ ಗಂಗಾ ಪ್ರಸಾದ್‌ ಅಲಿಯಾಸ್‌ ಫೌಜಿ ಎಂಬಾತನೇ ಜೀವಂತ ಹಾವನ್ನು ತಿಂದಾತ.. ಈತ ಡಕಾಯಿತನಾಗಿದ್ದ.. ಒಂದು ಕಾಲದಲ್ಲಿ ಈತ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ.. ಈ ಭಾಗದಲ್ಲಿ ಕುಖ್ಯಾತನಾಗಿದ್ದ ಈತ ಶಂಕರ್‌ ಗ್ಯಾಂಗ್‌ಗೆ ಸೇರಿದ್ದ.. ಇದೀಗ ಈ ಗ್ಯಾಂಗ್‌ ಬಿಟ್ಟಿದ್ದ ಗಂಗಾ ಪ್ರಸಾದ್‌, ಬಂಡಾ ಜಿಲ್ಲೆಯ ಕಮಾಸಿನ್‌ನ ಕಾಗರ್ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದಾನೆ..

ಅಂದಹಾಗೆ, ಸಂಬಂಧಿಕರ ಮನೆಗೆ ಬರುವುದಕ್ಕೂ ಮೊದಲು ಜೈಲಿನಲ್ಲಿದ್ದ.. ಜೈಲಿನಿಂದ ಬಿಡುಗಡೆಯಾದ ಮೇಲೆ ಸಂಬಂಧಿಕರ ಮನೆ ಸೇರಿದ್ದ.. ಏನೂ ಕೆಲಸವಿಲ್ಲದ ಈತ ಜೀವಂತ ಹಾವನ್ನು ಹಿಡಿದು ತಿಂದು ಎಲ್ಲರಿಗೂ ಮುಂದೆ ಪ್ರದರ್ಶನ ನೀಡಿದ್ದಾರೆ.. ನದಿಯಿಂದ ಹಾವನ್ನು ಹಿಡಿಯುವ ಈತ ಬಾಯಿಂದ ಹಾವಿನ ತಲೆಯನ್ನೂ ಕೂಡಾ ಕಚ್ಚಿ ತಿನ್ನುತ್ತಾನೆ.. ಈ ದೃಶ್ಯಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿವೆ..

 

Share Post