InternationalPolitics

ಪಾಕಿಸ್ತಾನದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಹಿಂದೂ ಯುವತಿ

ಇಸ್ಲಾಮಾಬಾದ್; 2024ರ ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಚುನಾವಣೆಗಳು ನಡೆಯಲಿದೆ. ಇದರಲ್ಲಿ ಹಿಂದೂ ಯುವತಿಯೊಬ್ಬಳು ಸ್ಪರ್ಧೆ ಮಾಡುತ್ತಿದ್ದಾಳೆ. ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಅಭ್ಯರ್ಥಿಯಾಗಿ ಹಿಂದೂ ಯುವತಿ ಸವೀರಾ ಪ್ರಕಾಶ್‌ ಅವರು ಕಣಕ್ಕಿಳಿದಿದ್ದಾರೆ. PK-25ರ ಜನರಲ್‌ ಸೀಟ್‌ಗಾಗಿ ಈಕೆ ಅಖಾಡಕ್ಕಿಳಿದಿದ್ದಾಳೆ.

ಸವೀರಾ ಪ್ರಕಾಶ್‌ ಅವರು ನಿವೃತ್ತ ವೈದ್ಯ ಓಂ ಪ್ರಕಾಶ್‌ ಅವರ ಮಗಳಾಗಿದ್ದಾಳೆ. ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ  ಈಕೆ ವಾಸವಿದ್ದಾಳೆ. ಸವೀರಾ ತಂದೆ ಪ್ರಕಾಶ್‌ ಅವರು 35 ವರ್ಷಗಳಿಂದ ಪಿಪಿಪಿಯ ಸದಸ್ಯರಾಗಿದ್ದಾರೆ. ಹೀಗಾಗಿ ತಂದೆಯ ಹಾದಿಯಲ್ಲೇ ಮಗಳ ಸವೀರಾ ಕೂಡಾ ಸಾಗುತ್ತಿದ್ದಾಳೆ.

ಬುನರ್ ಕ್ಷೇತ್ರದಿಂದ ಸವೀರಾ ನಾಮಪತ್ರ ಸಲ್ಲಿಸಿದ್ದು, ಇಲ್ಲಿ ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾಳೆ.

 

Share Post