CrimeNational

ಕೊಯಮತ್ತೂರು, ಮಂಗಳೂರು ಸ್ಫೋಟ ಪ್ರಕರಣ; ಹೊಣೆ ಹೊತ್ತ ಐಎಸ್‌ಕೆಪಿ ಉಗ್ರ ಸಂಘಟನೆ..!

ನವದೆಹಲಿ; ಕೊಯಮತ್ತೂರು ಹಾಗೂ ಮಂಗಳೂರಿನಲ್ಲಿ ಒಂದೇ ರೀತಿಯ ಸ್ಫೋಟ ಸಂಭವಿಸಿತ್ತು. ಈ ಎರಡನ್ನೂ ಒಬ್ಬರೇ ಮಾಡಿದ್ದಾರೆ ಎಂಬ ಗುಮಾನಿ ಮೇಲೆ ಎನ್‌ಐಎ ತನಿಖೆ ನಡೆಸುತ್ತಿದೆ. ಹೀಗಿರುವಾಗಲೇ ಉಗ್ರ ಸಂಘಟನೆಯೊಂದು ಇದರ ಹೊಣೆ ಹೊತ್ತುಕೊಂಡಿದೆ. ಐಎಸ್‌ಕೆಪಿ (ಖೊರಾಸನ್‌ ಪ್ರಾಂತ್ಯ ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆ ಇದರ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ಉಗ್ರ ಸಂಘಟನೆಯ ವಾಯ್ಸ್‌ ಆಫ್ ಖುರಾಸನ್ ನಿಯತಕಾಲಿಕೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಕೊಯಮತ್ತೂರು ಹಾಗೂ ಮಂಗಳೂರು ಸ್ಫೋಟದಲ್ಲಿ ನಮ್ಮ ಉಗ್ರರೇ ಭಾಗಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ನಮ್ಮವರು ನೆಲೆಸಿದ್ದಾರೆ ಎಂದು ಐಎಸ್‍ಕೆಪಿ ಹೇಳಿಕೊಂಡಿದೆ. 2022ರ ಅಕ್ಟೋಬರ್‌ 23ರಂದು ಕೊಯಮತ್ತೂರಿನಲ್ಲಿ ಕಾರು ಸ್ಫೋಟ ಸಂಭವಿಸಿತ್ತು. ಅನಂತರ ನವೆಂಬರ್‌ 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ನಡೆಸಿತ್ತು.

Share Post