46 ವರ್ಷದ ವೈದ್ಯನಿಗೆ ಒಮಿಕ್ರಾನ್; ವೈದ್ಯನ ಪತ್ನಿಗೆ ಕೊರೋನಾ ಸೋಂಕು
ಬೆಂಗಳೂರು: 46 ವರ್ಷದ ವೈದ್ಯನಿಗೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ನಿನ್ನೆ ಸೋಂಕು ಪತ್ತೆಯಾದ ಇಬ್ಬರಲ್ಲಿ ಈ ವೈದ್ಯರೂ ಸೇರಿದ್ದಾರೆ. ಇದೀಗ ವೈದ್ಯನ ಪತ್ನಿಗೂ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಅದು ಒಮಿಕ್ರಾನ್ ಸೋಂಕಾ ಅಥವಾ ಅಲ್ಲವೇ ಎಂಬುದರ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ.
ಇನ್ನು ವೈದ್ಯ ದಂಪತಿ ಜೊತೆ ಸಂಪರ್ಕವಿದ್ದ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಅವರೆಲ್ಲರನ್ನೂ ಕ್ವಾರಂಟೀನ್ ಮಾಡಲಾಗುತ್ತಿದೆ.