ಪರ್ಲ್ಸ್ ಗ್ರೂಪ್ ಸ್ಕ್ಯಾಮ್ : 11 ಮಂದಿ ಅರೆಸ್ಟ್ ಮಾಡಿದ ಸಿಬಿಐ
ಮುಂಬೈ : ಪರ್ಲ್ಸ್ ಗ್ರೂಪ್ ಸ್ಕ್ಯಾಮ್ಗೆ ಸಂಬಂಧಿಸಿದಂತೆ ಸಿಬಿಐ ೧೧ ಮಂದಿಯನ್ನು ಬಂಧಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಾಥಮಿಕ ವಿಚಾರಣೆ ನಡೆಸಿತ್ತು.
ಹೂಡಿಕೆದಾರರನ್ನು ವಂಚಿಸುವ ಉದ್ದೇಶದಿಂದ ಯಾವುದೇ ಶಾಸನಬದ್ಧ ಅನುಮೋದನೆಯಿಲ್ಲದೆ ಅಕ್ರಮವಾಗಿ ವಿವಿಧ ಹೂಡಿಕೆ ಯೋಜನೆಗಳನ್ನು ನಿರ್ವಹಿಸುವ ಮೂಲಕ ದೇಶಾದ್ಯಂತ ಸುಮಾರು 5 ಕೋಟಿ ಹೂಡಿಕೆದಾರರಿಂದ 60,000 ಕೋಟಿ ರೂಗಳನ್ನು ಹೂಡಿಕೆ ಮಾಡಿಸಿತ್ತು.
ವಿಚಾರಣೆ ಆಧಾರದ ಮೇಲೆ ಪರ್ಲ್ಸ್ ಗ್ರೂಪ್ನ ಮೂಖ್ಯಸ್ಥರನ್ನು ಸೇರಿದಂತೆ ೧೧ ಜನರನ್ನು ಬಂಧಿಸಲಾಗಿದೆ.
ಬಂಧಿತ ೧೧ ವ್ಯಕ್ತಿಗಳ ಹೆಸರು
ಶ್ರೀ ಚಂದರ್ ಭೂಷಣ್ ಧಿಲ್ಲೋನ್, ಶ್ರೀ ಪ್ರೇಮ್ ಸೇಠ್, ಶ್ರೀ ಮನಮೋಹನ್ ಕಮಲ್ ಮಹಾಜನ್, ಶ್ರೀ ಮೋಹನ್ ಲಾಲ್ ಸೆಹಜ್ಪಾಲ್, ಶ್ರೀ ಕನ್ವಾಲ್ಜಿತ್ ಸಿಂಗ್ ಟೂರ್ (ಎಲ್ಲರೂ ಪರ್ಲ್ಸ್ ಗ್ರೂಪ್ನಿಂದ); ಶ್ರೀ ಪ್ರವೀಣ್ ಕುಮಾರ್ ಅಗರ್ವಾಲ್, ಶ್ರೀ ಮನ್ನೋಜ್ ಕುಮಾರ್ ಜೈನ್, ಶ್ರೀ ಆಕಾಶ್ ಅಗರ್ವಾಲ್, ಶ್ರೀ ಅನಿಲ್ ಕುಮಾರ್ ಖೇಮ್ಕಾ, ಶ್ರೀ ಸುಭಾಷ್ ಅಗರ್ವಾಲ್, ಶ್ರೀ ರಾಜೇಶ್ ಅಗರ್ವಾಲ್ (ಎಲ್ಲಾ ಉದ್ಯಮಿಗಳು) ದೆಹಲಿ, ಚಂಡೀಗಢ, ಕೋಲ್ಕತ್ತಾ, ಭುವನೇಶ್ವರ್