ಬಂದೂಕುಧಾರಿಗಳಿಂದ ಏಕಾಏಕಿ ಗುಂಡಿನ ದಾಳಿ; 11 ಮಂದಿ ಗಂಭೀರ, ಓರ್ವ ಸಾವು..!
ಪಾಟ್ನಾ; ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಹನ್ನೊಂದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬ ಸಾವನ್ನಪ್ಪಿದ್ದಾನೆ.
ಬೈಕ್‍ನಲ್ಲಿ ಮಲ್ಹಿಪುರ್ ಚೌಕ್‍ಗೆ ಬಂದ ಬಂದೂಕುಧಾರಿಗಳು ಜನನಿಬಿಡ ಪ್ರದೇಶದಲ್ಲಿನ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 31 ಮತ್ತು 28ರಲ್ಲಿ ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಅಂಗಡಿಯವರು ತಮ್ಮ ಅಂಗಡಿಗಳನ್ನು ಬಿಟ್ಟು ಓಡಿದ್ದಾರೆ. ನಂತರ ಬಂದೂಕುಧಾರಿಗಳು ಬರೌನಿ ಥರ್ಮಲ್ ಚೌಕ್, ಬರೌನಿ, ತೆಘ್ರಾ, ಬಚ್ವಾರಾ ಮತ್ತು ರಾಜೇಂದ್ರ ಸೇತುವೆಗೆ ತೆರಳಿ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.