CrimeNational

ಗುಂಡಿಕ್ಕಿ ಬಿಜೆಪಿ ಮುಖಂಡನ ಕಗ್ಗೊಲೆ; ಬಿಹಾರದಲ್ಲಿ ಹಾಡಹಗಲೇ ಕೊಲೆ

ಪಟ್ನಾ; ಬಿಹಾರದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕತಿಹಾರ್ ಎಂಬಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಕತಿಹಾರ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ತೆಲ್ಟಾ ಗ್ರಾಮದ ಸಂಜೀವ್ ಮಿಶ್ರಾ ಕೊಲೆಗೀಡಾದವರು. ತೆಲ್ಟಾದಲ್ಲಿನ ತಮ್ಮ ಮನೆಯ ಹೊರಗೆ ಸಂಜೀವ್‌ ಮಿಶ್ರಾ ಕುಳಿತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ದಾಳಿಕೋರರು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮಿಶ್ರಾ ಅವರಿಗೆ ಎರಡು ಗುಂಡುಗಳು ತಗುಲಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳೆ ದ್ವೇಷ ಹಾಗೂ ಆಸ್ತಿ ವಿವಾದವೇ ದಾಳಿಗೆ ಕಾರಣ ಎಂದು ತಿಳಿದುಬಂದಿದೆ.

Share Post