CrimeNational

ರೈಲಿನಲ್ಲಿ ಮರ್ಮಾಂಗ ತೋರಿಸಿದ ಕಾಮುಕ; ಚಪ್ಪಲಿ ಸೇವೆ ಮಾಡಿದ ಮಹಿಳೆ!

ನವದೆಹಲಿ; ಸಹಪ್ರಯಾಣಿಕನೊಬ್ಬ ರೈಲಿನಲ್ಲಿ ಮಹಿಳೆಯೊಬ್ಬರಿಗೆ ತನ್ನ ಮರ್ಮಾಂಗ ತೋರಿಸಿ ವಿಕೃತ ಆನಂದಪಟ್ಟಿದ್ದಾನೆ.. ಆದ್ರೆ ಆನಂದ ಕ್ಷಣಾರ್ಧದಲ್ಲಿ ದುಃಖಕ್ಕೆ ಕಾರಣವಾಗಿದೆ.. ಯಾಕಂದ್ರೆ, ಆ ಮನುಷ್ಯ ವಿಕೃತಿ ನೋಡುತ್ತಲೇ ಆಕ್ರೋಶಗೊಂಡ ಮಹಿಳೆ, ಆತನಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ.. ಈ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕ ರೆಕಾರ್ಡ್‌ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.. ಈ ವಿಡಿಯೋ ಈಗ ಸಾಕಷ್ಟು ವೈರಲ್‌ ಆಗುತ್ತಿದೆ.. ಮಹಿಳೆಯ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ..
ಈ ಘಟನೆ ಭಾರತದಲ್ಲೇ ನಡೆದಿದೆ.. ಆದ್ರೆ ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಮಾತ್ರ ಸಿಕ್ಕಿಲ್ಲ.. RealBabanaras ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದೆ.. ಮೊಹಮ್ಮದ್‌ ತುಫೈಲ್‌ ಎಂಬಾತನೇ ಈ ಕೃತ್ಯ ಎಸಗಿರುವಾತನಾಗಿದ್ದಾನೆ.. ಎಲ್ಲರ ಮುಂದೆಯೇ ಆತ ತನ್ನ ಖಾಸಗಿ ಅಂಗವನ್ನು ಮಹಿಳೆಗೆ ಕಾಣುವಂತೆ ಪ್ರದರ್ಶಿಸಿದ್ದಾನೆ.. ಆ ಮೂಲಕ ವಿಕೃತ ಆನಂದಪಡಲು ಶುರು ಮಾಡಿದ್ದಾನೆ.. ಇದನ್ನು ನೋಡುತ್ತಿದ್ದಂತೆ ಮಹಿಳೆ ಚಂಡಿಯಾಗಿದ್ದಾಳೆ.. ಚಪ್ಪಲಿ ತೆಗೆದು ಆತನಿಗೆ ಚೆನ್ನಾಗಿ ಬಾರಿಸಿದ್ದಾಳೆ.. ಈ ವೇಳೆ ಸಹಪ್ರಯಾಣಿಕರೂ ಆಕೆಯ ನೆರವಿಗೆ ಬಂದಿದ್ದಾರೆ..

 

Share Post