Districts

ಹಿಜಾಬ್‌ ಆಯ್ತು, ಕೇಸರಿ ಆಯ್ತು, ಇದೀಗ ಶಾಲೆಗಳಿಗೆ ಬಿಳಿ ಟೋಪಿ ಎಂಟ್ರಿ

ದಾವಣಗೆರೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಿಜಾಬ್‌ ವಿವಾದ ಮರುರೂಪ ಪಡೆದುಕೊಳ್ಳುತ್ತಿದೆ. ಶಾಲೆ ಬೇಕಾದ್ರೆ ಬಿಡ್ತೇವೆ ಹಿಜಾಬ್‌ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇತ್ತ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತದೆ. ಇದರ ನಡುವೆ ಸಾಲೆಗಳಿಗೆ ಬಿಳಿ ಟೋಪಿ ಧರಿಸಿ ವಿದ್ಯಾರ್ಥಿಗಳು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸಾಸಿವೆ ಹಳ್ಳಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇದೀಗ ಬಿಳಿ ಟೋಪಿ ಧರಿಸಿ ಶಾಲೆಗೆ ಹಾಜರಾಗಿದ್ದಾರೆ. ನಮಾಜ್‌ ವೇಳೆ ಬಳಸುವ ಬಿಳಿ ಟೋಪಿ ಧರಿಸಿ ಬಂದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹೊರಗೆ ನಿಲ್ಲಿಸಿದೆ. ಟೋಪಿ ತೆಗೆದು ಒಳಬರುವಂತೆ ಎಷ್ಟು ಹೇಳಿದ್ರೂ ಕೇಳದೆ ಶಿಕ್ಷಕರ ಮಾತನ್ನು ನಿರಾಕರಿಸಿದ್ದಾರೆ. ಎಂದೂ ಟೋಪಿ ಧರಿಸಿ ಬಾರದ ವಿದ್ಯಾರ್ಥಿಗಳನ್ನು ಇಂದು ಟೋಪಿ ಹಾಕಿಕೊಂಡು ಬಂದಿರುವುದು ಶಾಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದೆ.

ಸ್ಥಳಕ್ಕೆ ಹೊನ್ನಾಳಿ ತಹಶೀಲ್ದಾರ್‌ ಬಸನಗೌಡ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನ ಪಟ್ಟರು ಆದ್ರೆ ವಿದ್ಯಾರ್ಥಿಗಳು ಯಾವುದಕ್ಕೂ ಬಗ್ಗದೆ. ಟೋಪಿ ಹಾಕಿಕೊಂಡೇ ಶಾಲೆಗೆ ಬರುವುದಾಗಿ ಹಠ ಹಿಡಿದು ಕುಳಿತಿದ್ದಾರೆ.

Share Post