CrimeNational

ರಾಜಸ್ಥಾನದಲ್ಲಿ ಭೀಕರ ಅಪಘಾತ; ಎಂಟು ಮಂದಿ ದುರ್ಮರಣ

ರಾಜಸ್ಥಾನ; ಕಾರು ಮತ್ತು ಟ್ರಕ್​​ ಮಧ್ಯೆ ಡಿಕ್ಕಿ ಸಂಭವಿಸಿ ಒಂದು ಕುಟುಂಬದ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇಲ್ಲಿನ ಬಾಡ್‌ಮೇರ್‌ ಜಿಲ್ಲೆಯ ಗುಡಮಲಾನಿ ಮೆಗಾ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಎಸ್‌ಯುವಿ ಕಾರಿನಲ್ಲಿದ್ದವರು ಗುಡಮಲಾನಿ ಬಳಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು. ಜಲೋರ್‌ ಜಿಲ್ಲೆ ಸಂಚೋರ್‌ನಿಂದ ಇವರೆಲ್ಲಾ ಗುಮಲಾನಿಗೆ ಬರುತ್ತಿದ್ದರು. ಇನ್ನೇನು ಕೆಲವೇ ಕಿಲೋ ಮೀಟರ್‌ ದೂರವಿತ್ತು ಅಷ್ಟೇ. ಅಷ್ಟರಲ್ಲೇ ಯಮ ಅಡ್ಡ ಬಂದಿದ್ದಾನೆ. ಟ್ರಕ್‌ ಮುಖಾಮುಖಿಯಾದ ಕಾರಣ ಕಾರಿನಲ್ಲಿದ್ದವರು ನಜ್ಜುಗುಜ್ಜಾಗಿದ್ದಾರೆ.

ಘಟನೆ ನಡೆದ ಸ್ಥಳದಲ್ಲೇ 6 ಮಂದಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಗುಡಮಲಾನಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಚೋರ್‌ಗೆ ರವಾನಿಸಲಾಗಿದೆ.

Share Post