CrimeNational

ಆಶ್ರಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ; ದೂರು ದಾಖಲು

ಲಕ್ನೋ; ದೇವಾಲಯಕ್ಕೆ ಸೇರಿದ ಆಶ್ರಮ ಒಂದರಲ್ಲಿ 52 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ಗೋಮತಿ ನಗರದಲ್ಲಿ ನಡೆದಿದೆ. 

ಅಕ್ಟೋಬರ್‌ 4ರಂದು ಈ ಕೃತ್ಯ ಎಸಗಲಾಗಿದ್ದು, ಇದೀಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರಕ್ಕೊಳಗಾದ ಮಹಿಳೆ ಈ ಮೊದಲು ಮಥುರಾ ಆಶ್ರಮದಲ್ಲಿದ್ದರು. ಆದ್ರೆ ಸನ್ಯಾಸಿನಿಯೊಬ್ಬರ ಸೂಚನೆಯಂತೆ ಇತ್ತೀಚೆಗೆ ಲಕ್ನೋದ ಆಶ್ರಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಆದ್ರೆ ಆ ಸನ್ಯಾಸಿನಿ ಕೆಲಸದ ಕಾರಣ ವಾರಾಣಸಿಗೆ ಹೋಗಿದ್ದು, ಈ ಸಮಯದಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ.

ಕೆಲ ಕಾಮುಕರು ಊಟದಲ್ಲಿ ಮತ್ತು ಬರೋ ವಸ್ತು ಹಾಕಿ, ಆಕೆಗೆ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ಅನಂತರ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಗೆ ಪ್ರಜ್ಞೆ ಬಂದಾಗ ಆಕೆ ಬೆತ್ತಲೆಯಾಗಿದ್ದಳು ಎಂದು ತಿಳಿದುಬಂದಿದೆ.

Share Post