CrimeNational

ಉಗ್ರರಿಂದ ಗ್ರೆನೇಡ್‌ ದಾಳಿ; ಇಬ್ಬರು ಕಾರ್ಮಿಕರ ದುರ್ಮರಣ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಕಾರ್ಮಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ಏಕಾಏಕಿ ಗ್ರೆನೇಡ್‌ ದಾಳಿ ನಡೆಸಿದ್ದು, ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಹತರಾಗಿದ್ದಾರೆ.

ಈ ವೇಳೆ ಭದ್ರತಾ ಸಿಬ್ಬಂದಿ ಕೂಡಾ ಪ್ರತಿ ದಾಳಿ ನಡೆಸಿದೆ. ಭದ್ರತಾ ಸಿಬ್ಬಂದಿ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಶ್ಮೀರಿ ಪಂಡಿತರನ್ನು ಗುಂಡಿಕ್ಕಿ ಹತ್ಯೆಗೈದ ಇನ್ನೂ ಒಂದು ದಿನವೂ ಕಳೆದಿರಲಿಲ್ಲ, ಆಗಲೇ ಮತ್ತೊಂದು ದಾಳಿ ನಡೆದಿದೆ. ಮೊನೀಶ್‌ ಕುಮಾರ್‌ ಮತ್ತು ರಾಮ್‌ ಸಾಗರ್‌ ಹತ್ಯೆಯಾದ ಕಾರ್ಮಿಕರು. ಹ್ಯಾಂಡ್‌ಮೇಡ್‌ ಗ್ರೆನೇಡ್‌ ದಾಳಿಯಿಂದ ಈ ಇಬ್ಬರೂ ತೀವ್ರಗಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

Share Post