CrimeDistricts

ಸುಳ್ಳು ಅತ್ಯಾಚಾರ ಕೇಸ್‌ ದಾಖಲಿಸಿದ್ದ ಯುವತಿ ಸೇರಿ 13 ಮಂದಿಗೆ ಶಿಕ್ಷೆ!

ಬೆಳಗಾವಿ; 2014ರಲ್ಲಿ ಹೆಸ್ಕಾಂ ಸಹಾಯಕ ಎಂಜಿನಿಯರ್‌ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆ ಸೇರಿ 13 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.. ಎಲ್ಲರಿಗೂ ತಲಾ 3 ವರ್ಷ 6 ತಿಂಗಳು ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.. 

2014ರ ನವೆಂಬರ್ 19ರಂದು ಮಾಳ ಮಾರುತಿ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಕೇಸ್‌ ಅನ್ನು ಬಿ.ವಿ.ಸಿಂಧು ದಾಖಲಿಸಿದ್ದಳು.. ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರರಾದ ತುಕಾರಾಮ್ ಮಜ್ಜಿಗೆ ವಿರುದ್ಧ ಈ ಆರೋಪ ಮಾಡಲಾಗಿತ್ತು.. ಆದ್ರೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪ ಸುಳ್ಳು ಎಂದು ತನಿಖೆಯಲ್ಲಿ ಬಯಲಾಗಿದೆ ಎಂದು ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು..

ಅನಂತರ ದೂರುದಾರೆಯಾಗಿದ್ದ ಸಿಂಧು ಕೂಡಾ ಕೂಡಾ ಇತರೆ ಅಪರಾಧಿಗಳ ಪ್ರಚೋದನೆಯಿಂದ ಈ ರೀತಿ ಸುಳ್ಳು ದೂರು ನೀಡಿರೋದಾಗಿ ಒಪ್ಪಿಕೊಂಡಿದ್ದಳು.. ಹೀಗಾಗಿ  2017ರಲ್ಲಿ ದೂರುದಾರೆ ಸಿಂಧು ಸೇರಿ 13 ಜನರ ವಿರುದ್ಧ ಸಂತ್ರಸ್ತ ಅಧಿಕಾರಿ ತುಕಾರಾಮ್‌ ಮಜ್ಜಗೆ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು.

 

Share Post