Bengaluru

144 ಅಲ್ಲ, 544 ಜಾರಿ ಮಾಡಲಿ, ನಾವು ಬಂದ್‌ ಮಾಡೇ ತೀರ್ತೀವಿ; ವಾಟಾಳ್‌ ನಾಗರಾಜ್‌

ಬೆಂಗಳೂರು; ನಾವು ಸ್ವಂತಕ್ಕೆ ಬಂದ್‌ ಮಾಡುತ್ತಿಲ್ಲ. ಕಾವೇರಿಗಾಗಿ ಬಂದ್‌ ಮಾಡುತ್ತಿದ್ದೇವೆ. ಹೀಗಾಗಿ ಸಾರ್ವಜನಿಕರೆಲ್ಲಾ ಬಂದ್‌ಗೆ ಬೆಂಬಲ ಕೊಡಬೇಕು ಅಂತ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ತೆರೆದ ವಾಹನದಲ್ಲಿ ತೆರಳಿ ಬಂದ್‌ ಸಹಕರಿಸುವಂತೆ ವಾಟಾಳ್‌ ನಾಗರಾಜ್‌ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯ ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿದೆ. ನಾಳೆಯ ಬಂದ್‌ ಯಶಸ್ವಿಯಾಗುತ್ತದೆ. ನಾಳೆ ನಾವು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ಮಾಡೇ ಮಾಡ್ತೀವಿ. ನಾವು ಯಾರ ವಿರುದ್ಧವೂ ಹೋರಾಟ ಮಾಡ್ತಿಲ್ಲ. ಬಂದ್‌ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಬೆಂಬಲ ಕೊಡಬೇಕು ಎಂದು ವಾಟಾಳ್‌ ನಾಗರಾಜ್‌ ಮನವಿ ಮಾಡಿದರು.

ಇನ್ನು 144 ಅಲ್ಲಾ, 544 ಸೆಕ್ಷನ್ ಜಾರಿ ಮಾಡಲಿ ನಾವು ಟೌನ್ ಹಾಲ್ ನಿಂದ ಮೆರವಣಿಗೆ ಮಾಡೇ ತೀರುತ್ತೇವೆ ಎಂದು ವಾಟಾಳ್‌ ನಾಗಾರಾಜ್‌ ಹೇಳಿದ್ದಾರೆ.

Share Post