ಅಮೆರಿಕ ವಾಲ್‌ಮಾರ್ಟ್ ಮಳಿಗೆಯಲ್ಲಿ ಗುಂಡಿನ ದಾಳಿ; ಹತ್ತು ಮಂದಿ ದಾರುಣ ಸಾವು
ವರ್ಜಿನಿಯಾ; ಅಮೆರಿಕ ವಾಲ್ ಮಾರ್ಟ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಹತ್ತು ಮಂದಿ ಬಲಿಯಾಗಿದ್ದಾರೆ. ಚೆಸಾಪೀಕ್ ನಗರದ ಸ್ಯಾಮ್ ಸರ್ಕಲ್‌ನ ವಾಲ್‌ಮಾರ್ಟ್ ಮಳಿಗೆಯಲ್ಲಿ ಈ ಕೃತ್ಯ ನಡೆದಿದೆ. ಬಂದೂಕುದಾರಿಯೊಬ್ಬ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಕೂಡಾ ಮೃತಪಟ್ಟಿದ್ದು, ಆತ ಹೇಗೆ ಮೃತಪಟ್ಟ ಎಂಬುದು ಇನ್ನೂ ಗೊತ್ತಾಗಿಲ್ಲ.
ಈ ಬಗ್ಗೆ ವರ್ಜೀನಿಯಾ ರಾಜ್ಯದ ಸೆನೆಟರ್ ಲೂಯಿಸ್ ಲ್ಯೂಕಾಸ್ ಟ್ವೀಟ್ ಮಾಡಿದ್ದಾರೆ. ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ ನಡೆದಿರುವುದು ದುರದೃಷ್ಟಕರ. ಇಂತಹ ಹಿಂಸಾಚಾರದ ಸಾಂಕ್ರಾಮಿಕ ಕೊನೆಗೊಳ್ಳಬೇಕು ಎಂದು ಅವರು ಬರೆದುಕೊಂಡಿದ್ದಾರೆ. ಪೊಲೀಸರು ಬಹುಬೇಗ ಕಾರ್ಯಾಚರಣೆ ನಡೆಸಿದ್ದರಿಂದಾಗಿ ಇನ್ನೂ ಹಲವರ ಪ್ರಾಣ ಉಳಿದಿದೆ. ಇಲ್ಲದಿದ್ದರೆ ಇನ್ನಷ್ಟು ಬಲಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.