ರಾಬರಿಯಾದ ಬಗ್ಗೆ ಕಥೆ ಕಟ್ಟಿದ್ದ ವ್ಯಕ್ತಿ ಅರೆಸ್ಟ್
ಬೆಂಗಳೂರು; ಆರೋಪಿಯೊಬ್ಬ ತಾನೇ ದೂರು ನೀಡಿ ತಾನೆ ಲಾಕ್ ಆದ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಡೆದಿದೆ.
ಆರೋಪಿ ಮೂಲರಾಮ್ಗೆ ಅಶೋಕ್ ಎಂಬುವರಿಗೆ ಹಣ ತಲುಪಿಸಲು ವಿಕ್ರಮ್ ಎಂಬಾತ 10 ಲಕ್ಷ ಹಣ ನೀಡಿದ್ದ.ವಿಕ್ರಮ್ ಮೂಲಾರಾಮ್ ಮೇಲೆ ನಂಬಿಕೆ ಇಟ್ಟು ಹಣ ವನ್ನ ನೀಡಿದ್ದಾ, ಮೂಲಾರಾಮ್ ತನ್ನ
ಕೈಗೆ ಹಣಬಂದಿದ್ದೇ ತಡ 10 ಲಕ್ಷವನ್ನ ತಾನ ಹೊಡೆದು ಕೊಳ್ಳಲು ಮುಂದಾದ.ಅದಕ್ಕಾಗಿ ಆತ ರಾಬರಿ ಕಥೆಯನ್ನ ಕಟ್ಟಿದ್ದ.ಸಿರ್ಸಿ ಸರ್ಕಲ್ ಬಳಿ ಖಾಲಿ ಬ್ಯಾಗ್ ಬಿಸಾಡಿ ತನ್ನ ಕೈಯನ್ನ ತಾನೆ ಕೊಯ್ದುಕೊಂಡು
ನಂತರ ರಾಬರಿ ಮಾಡಿದ್ದಾರೆಂದು ಚಾಮರಾಜಪೇಟೆ ಠಾಣೆಯಲ್ಲಿ ಜನವರಿ 13 ರ ರಾತ್ರಿ 8 ಗಂಟೆಗೆ ನಾಟಕ ವಾಡಿ ದೂರು ದಾಖಲಿಸಿದ್ದ.
ಕೈಮೇಲಿನ ಗಾಯ ನೋಡಿದಾಗಲೇ ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿತ್ತು.
ಈ ವೇಳೆ ಆತನನ್ನ ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಿಸಿದಾಗ ಅಸಲಿ ಸತ್ಯ ಮೂಲಾರಾಮ್ ಬಾಯ್ಬುಟ್ಟಿದ್ದಾನೆ.ಆರೋಪಿ ಮನೆಯಲ್ಲಿಟ್ಟಿದ್ದ 10 ಲಕ್ಷ ಹಣವನ್ನ ರಿಕವರಿಮಾಡಿರೋ ಚಾಮರಾಜಪೇಟೆ ಪೊಲೀಸರು ಆರೋಪಿ ಬಂಧಿಸಿದ್ದಾರೆ.