Crime

ನವಜಾತ ಶಿಶು ಕೊಂದು ಬೀಸಾಡಿದ ಪ್ರಕರಣ, ಆರೋಪಿಗಳ ಬಂಧನ

ತಿರುವನಂತಪುರಂ : ನವಜಾತ ಶಿಶುವನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿ ಕಾಲುವೆಗೆ ಬೀಸಾಕಿದ್ದು, ಯುವತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದಲ್ಲಿ ತ್ರಿಶೂರ್‌ ನಲ್ಲಿ ನಡೆದಿದೆ. ಮೇಘಾ (22) ಮತ್ತು ಮ್ಯಾನುಯೆಲ್ (25) ಮತ್ತು ಆತನ ಸ್ನೇಹಿತ ಅಮಲ್ (24) ಬಂಧಿತರು. ಮೊನ್ನೆ ಗೋಣಿಚೀಲದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ವೀಡಿಯೋದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಗೋಣೀಚೀಲವನ್ನು ಕಾಲುವೆಗೆ ಎಸೆದುಹೋಗಿರುವುದು ಕಂಡುಬಂದಿದೆ. ನಂತರ ವರಾಯಿಡಂ ಮೂಲದ ಆರೋಪಿ ಮ್ಯಾನುಯೆಲ್ ಮತ್ತು ಆತನ ಸ್ನೇಹಿತ ಅಮಲ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು.

Share Post