CrimeNational

ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವು

ಮುಂಬೈ (ಮಹಾರಾಷ್ಟ್ರ); ಟಾಟಾ ಸಮೂಹದ ಮಾಜಿ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಇಂದು ಮುಂಬೈ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸೈರಸ್ ಮಿಸ್ತ್ರಿ ಅವರು 2012ರಲ್ಲಿ ಟಾಟಾ ಗ್ರೂಪ್‌ನ ಆರನೇ ಅಧ್ಯಕ್ಷರಾಗಿ ನೇವಕವಾಗಿದ್ದರು. ಟಾಟಾ ನಿರ್ದೇಶಕರ ಮಂಡಳಿ 2016ರ ಅಕ್ಟೋಬರ್ 24ರಂದು ಅವರನ್ನು ವಜಾಗೊಳಿಸಲಾಗಿತ್ತು. ಜೊತೆಗೆ ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವೆ ವಿವಾದವಿತ್ತು. ಇದರಿಂದಲೇ ಅವರು ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಪ್ರಕರಣ ನೇರವಾಗಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

Share Post