BengaluruSports

ಅನಿಲ್‌ ಕುಂಬ್ಳೆಗೂ ತಟ್ಟಿದ ಮುಷ್ಕರದ ಬಿಸಿ; ಬಿಎಂಟಿಸಿಯಲ್ಲಿ ಪ್ರಯಾಣಿಸಿದ ಮಾಜಿ ಕ್ರಿಕೆಟಿಗ

ಬೆಂಗಳೂರು; ಖಾಸಗಿ ಸಾರಿಗೆ ಮುಷ್ಕರದ ಬಿಸಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆಗೆ ಕೂಡಾ ತಟ್ಟಿದೆ. ಖಾಸಗಿ ಸಾರಿಗೆ ಮುಷ್ಕರಕ್ಕೆ ಕ್ಯಾಬ್‌ ಗಳ ಸಂಘಗಳೂ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಬರುವವರಿಗೆ ಕ್ಯಾಬ್‌ಗಳ ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲರೂ ಇಂದು ಬಿಎಂಟಿಸಿ ಬಸ್‌ಗಳನ್ನೇ ಅಶ್ರಯಿಸಿದ್ದಾರೆ.

ಹೀಗಾಗಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಕೂಡಾ ಇಂದು ಬಿಎಂಟಿಸಿ ಬಸ್‌ನಲ್ಲೇ ಪ್ರಯಾಣಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಮನೆಗೆ ಬಿಎಂಟಿಸಿ ಬಸ್‌ನಲ್ಲೇ ಪ್ರಯಾಣಿಸಿದ್ದಾರೆ. ಅವರ ಫೋಟೋವನ್ನು ಅವರು ಸಾಮಾಜಿಕ ಜಾಲತಾಣ ʻಎಕ್ಸ್‌ʼನಲ್ಲಿ ಹಂಚಿಕೊಂಡಿದ್ದಾರೆ.

Share Post