Cinema

ಮತ್ತೊಂದು ಐಟಂ ಸಾಂಗಿನಲ್ಲಿ ಸಮಂತಾ

ಸಮಂತಾ ಅವರು ವಿಚ್ಛೇದನದ ಬಳಿಕ ಚಿತ್ರರಂಗದಲ್ಲಿ ಸಾಕಷ್ಟು ಆಕ್ಟೀವ್‌ ಆಗಿದ್ದಾರೆ. ದಾಂಪತ್ಯ ಜೀವನ ಮುರಿದುಕೊಂಡ ನಂತರ ಸಮಂತಾ ಅವರಿಗೆ ಸಿಕ್ಕ ದೊಡ್ಡ ಸಕ್ಸಸ್‌ ಎಂದರೆ ಅದು ಪುಷ್ಪ ಸಿನಿಮಾದ ಐಟಂ ಸಾಂಗ್.‌ ಹೂ ಅಂತೀಯಾ ಮಾವ, ಹುಹೂಂ ಅಂತೀಯಾ ಮಾವ ಹಾಡು ಯಾವ ಮಟ್ಟಕ್ಕೆ ಖ್ಯಾತಿಗಳಿಸಿದೆ ಎಂದರೆ ಆಡುವ ಮಕ್ಕಳ ಬಾಯಲ್ಲಿಯೂ ಇದೇ ಹಾಡು ನಲಿದಾಡುತ್ತಿದೆ.

ಇನ್ನು ಇನ್ಸ್ಟಾಗ್ರಾಂ ರೀಲ್ಸ್‌, ಯೂಟ್ಯೂಬ್‌ ಶಾರ್ಟ್ಸ್‌ ಸೇರಿದಂತೆ ಎಲ್ಲಾ ಪ್ಲಾಟ್ ಫಾರ್ಮ್‌ಗಳಲ್ಲಿಯೂ ಈ ಹಾಡಿನ ತುಣುಕಿಗೆ ಸಾವಿರಾರು ವಿಡಿಯೋ ಮಾಡಿಬಿಟ್ಟಿದ್ದಾರೆ.

ಸಮಂತಾ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಪರ ವಿರೋಧದ ಚರ್ಚೆಗಳು ನಡೆದವು. ಆದರೆ ಅದ್ಯಾವುದಕ್ಕೂ ಸೊಪ್ಪು ಹಾಕದ ಸಮಂತಾ ಮತ್ತೊಂದು ಐಟಂ ಹಾಡಿಗೆ ಹೆಜ್ಜೆ ಹಾಕಲು ಸಜ್ಜಾಗುತ್ತಿದ್ದಾರೆ.

ಸಮಂತಾ ಅವರ ಮೈಮಾಟಕ್ಕೆ ಚಿತ್ರರಸಿಕರು ಫಿದಾ ಆಗಿದ್ದಾರೆ.

ಅರ್ಜುನ್‌ ರೆಡ್ಡಿ ಮತ್ತು ಗೀತಾ ಗೋವಿಂದಂ ಮೂಲಕ ಖ್ಯಾತಿ ಪಡೆದ ವಿಜಯ್‌ ದೇವರಕೊಂಡ ಲೈಗರ್‌ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಲೈಗರ್‌ ಸಿನಿಮಾ ಬಾಲಿವುಡ್‌ ಸಿನಿಮಾ ಆಗಿದೆ. ಇದನ್ನು ನಿರ್ದೇಶನ ಮಾಡುತ್ತಿರುವವರು ಪೂರಿಜಗನ್ನಾಥ್.‌ ಸಮಂತಾ ಅವರೊಟ್ಟಿಗೆ ಚಿತ್ರತಂಡ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿ ಒಪ್ಪಿಸಿದೆ.

ಸದ್ಯದಲ್ಲೇ ಚಿತ್ರಸಿಕರಿಗೆ ಸಮಂತಾ ತಮ್ಮ ಮೈಮಾಟದಿಂದ ಹಬ್ಬದೂಟ ನೀಡಲಿದ್ದಾರೆ.

Share Post