BengaluruCinemaPolitics

ಶಿವರಾಜ್‌ಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಸಂಬರಗಿ ವಿರುದ್ಧ ಸಿಡಿದೆದ್ದ ಅಭಿಮಾನಿಗಳು..!

ಬೆಂಗಳೂರು; ಶಿವರಾಜ್‌ ಕುಮಾರ್‌ ಅವರು ಸಿದ್ದರಾಮಯ್ಯ ಅವರ ಪರ ವರುಣಾದಲ್ಲಿ ಪ್ರಚಾರಕ್ಕೆ ಹೋದ ಕಾರಣದಿಂದಾಗಿ ಹಲವು ಅಪಸ್ವರಗಳು ಕೇಳಿಬಂದಿದ್ದವು. ಅನಂತರ ಶಿವಣ್ಣ ಇದಕ್ಕೆ ಸಮಜಾಯಿಷಿ ಕೊಟ್ಟಿದ್ದರು. ಅದಾದ ಮೇಲೆ ಅಪಸ್ವರ ಎತ್ತಿದ್ದ ಕೆಲವರು ವರಸೆ ಬದಲಿಸಿದ್ದರು. ಶಿವಣ್ಣ ವಿರುದ್ಧ ಟ್ವೀಟ್‌ ಮಾಡಿದ್ದ ಸಂಸದ ಪ್ರತಾಪ ಸಿಂಹ ಕೂಡಾ ನಾನೂ ಶಿವಣ್ಣನ ಅಬಿಮಾನಿ ಎಂದು ಹೇಳಿದ್ದರು. ಈ ನಡುವೆ ಪ್ರಶಾಂತ್‌ ಸಂಬರಗಿ ಎಂಬುವವರು ಶಿವರಾಜ್‌ಕುಮಾರ್‌ ವಿರುದ್ಧ ಫೇಸ್‌ ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ. ಇದರ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದಾರೆ. ಸಂಬರಗಿಗೆ ವಾಚಮಗೋಚರವಾಗಿ ಬೈಯ್ಯುತ್ತಿದ್ದಾರೆ.

ಪ್ರಶಾಂತ್‌ ಸಂಬರಗಿ ಫೇಸ್‌ಬುಕ್‌ ಪೋಸ್ಟ್‌ ಯಥಾವತ್‌ ವಿವರ ಇಲ್ಲಿದೆ;
‘ಶಿವಣ್ಣ ಯಾವತ್ತೂ Script ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ Namma Shivanna. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ Payment ತಗೊಂಡು ಇನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ…….. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’

ಹೀಗಂತ ಸಂಬರಗಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಂಬರಗಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಕೂಡಾ ಸಂಬರಗಿ ದೇವೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು.

Share Post