ದಾಂಪತ್ಯಕ್ಕೆ ಕಾಲಿಟ್ಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ
ಮೈಸೂರು; ಸ್ಯಾಂಡಲ್‌ವುಡ್‌ನ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಇಬ್ಬರು ಮದುವೆ ಸಮಾರಂಭ ನಡೆದಿದ್ದು, ಚಿತ್ರರಂಗ ಹಲವು ಗಣ್ಯರು ಈ ಮದುವೆಗೆ ಸಾಕ್ಷಿಯಾದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿ ನೂತನ ವಧು- ವರನಿಗೆ ಆಶೀರ್ವದಿಸಿದರು.