CinemaNational

ಪವಿತ್ರಾ-ನರೇಶ್‌ ಮದುವೆಯಾಗ್ತಿದಾರಂತೆ ನಿಜಾನಾ..?; ಆ ವಿಡಿಯೋ ಹಾಕಿದ್ದು ಯಾರು..?

ಹೈದರಾಬಾದ್‌; ಹಿರಿಯ ನಟಿ ಪವಿತ್ರಾ ಲೋಕೇಶ್‌ ಹಾಗೂ ನಟ ನರೇಶ್‌ ನಡುವೆ ಲವ್ವಿ ಡವ್ವಿ ಇದೆ ಎಂಬ ಸುಧ್ದಿಗಳು ಇತ್ತೀಚೆಗೆ ಭಾರಿ ಸದ್ದು ಮಾಡಿದ್ದವು. ಇದರ ಜೊತೆಗೆ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಈ ಸುದ್ದಿಗಳಿಗೆ ಪುಷ್ಠಿ ನೀಡಿದ್ದರು. ಇದೀಗ ಇವರಿಬ್ಬರೂ ಮದುವೆ ಮಾಡಿಕೊಳ್ಳುತ್ತಿದ್ದಾರಂತೆ. ಸೋಷಿಯಲ್‌ ಮೀಡಿಯಾದಲ್ಲಿ ನರೇಶ್‌ ಹೆಸರಿನ ಅಕೌಂಟ್‌ನಲ್ಲಿ ಒಂದು ವಿಡಿಯೋ ಹಾಕಲಾಗಿದ್ದು, ಇಬ್ಬರೂ ಕೇಕ್‌ ಕಟ್‌ ಮಾಡಿ ಸಿಹಿ ಚುಂಬನ ನೀಡುವ ಮೂಲಕ ಯೆಸ್ ನಾವು ಮದುವೆಯಾಗುತ್ತಿದ್ದೇವೆ ಅನೌನ್ಸ್‌ ಮಾಡಲಾಗಿದೆ. ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇನ್ನು ಷೇರ್‌ ಮಾಡಿರುವ ವಿಡಿಯೋದಲ್ಲಿ ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮದುವೆ ಎಂದು ತಿಳಿಸಿದ್ದಾರೆ. ಮದುವೆ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ನರೇಶ್, ಪವಿತ್ರಾ ಶುಭಹಾರೈಸುತ್ತಿದ್ದಾರೆ.

Share Post