Cinema

ಅಮೆರಿಕಾದಲ್ಲೂ RRRಸಿನಿಮಾ ಹವಾ, ʻನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಿದ ʻಟೆಡ್ಡಿʼ

ಅಮೆರಿಕಾ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಆರ್‌ಆರ್‌ಆರ್‌’ ಮಾಸ್‌ ಸಾಂಗ್‌ನದ್ದೇ ಹವಾ. ಎಲ್ಲಿ ಕೇಳಿದರೂ.. ಎಲ್ಲಿ ನೋಡಿದರೂ ಇದೇ.. ಯಂಗ್ ಟೈಗರ್ ಎನ್.ಟಿ.ಆರ್ – ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಬ್ಬರೂ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಈ ಇಬ್ಬರು ನಾಯಕರು ಅತ್ಯುತ್ತಮ ನೃತ್ಯಗಾರರಾಗಿದ್ದು, ಒಂದೇ ಹಾಡಿನಲ್ಲಿ ಇವರಿಬ್ಬರು ಜೊತೆಯಾಗಿ ಹೆಜ್ಜೆ ಹಾಕಿರುವುದು ಬಾಕ್ಸಾಫಿಸ್‌ ಧೂಳೆಬ್ಬಿಸಿದೆ.

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ.. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ ಹುಡುಗನೊಬ್ಬ ಈ ಹಾಡಿಗೆ ಟೆಡ್ಡಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಹರಿದಾಡಿದೆ. USA ನಲ್ಲಿ Naatufied ಹೆಸರಿನಲ್ಲಿ ಹಂಚಿಕೊಂಡಿರುವ ವೀಡಿಯೊ ಈಗ ವೈರಲ್ ಆಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಬಾಕ್ಸ್ ಆಫೀಸ್ ನಲ್ಲಿ ಆರ್ ಆರ್ ಆರ್ ದಾಖಲೆ ಮಾಡುತ್ತಿತ್ತು. ಜನವರಿ 7ರಿಂದ ಈ ಸಿನಿಮಾವನ್ನು ಮುಂದೂಡುತ್ತಾ ಬಂದಿದ್ದಾರೆ. ಮಾರ್ಚ್ 18 ಅಥವಾ ಏಪ್ರಿಲ್ 28 ರಂದು ಬಿಡುಗಡೆ ಮಾಡಲು ಪ್ಲಾನ್‌ ಮಾಡ್ತಿದ್ದಾರೆ ಚಿತ್ರತಂಡ.

Share Post