Cinema

ತಮಿಳು ನಟ ವಿಕ್ರಂಗೆ ಹೃದಯಾಘಾತ; ಕಾವೇರಿ ಆಸ್ಪತ್ರೆಗೆ ದಾಖಲು

ಚೆನ್ನೈ; ತಮಿಳು ನಟ ವಿಕ್ರಮ್ ಹೃದಯಾಘಾತಕ್ಕೊಳಗಾಗಿದ್ದಾರೆ. ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಾಗಲಿ ಅಥವಾ ವಿಕ್ರಮ್ ಅವರ ವಕ್ತಾರರಾಗಲಿ ಅವರ ಸ್ಥಿತಿಯ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ತಜ್ಞ ವೈದ್ಯರು ವಿಕ್ರಂ ಅವರಿಗೆ ಚಿಕಿತ್ಸೆ ನೀಡುತ್ತಿದ್ದು,  ಅವರ ಆರೋಗ್ಯ ಸ್ಥಿತಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಬ್ಯವಾಗಬೇಕಿದೆ.

ಇಂದು ಸಂಜೆ ಚೆನ್ನೈನಲ್ಲಿ ನಡೆಯಲಿರುವ ಪೊನ್ನಿಯಿನ್ ಸೆಲ್ವನ್: ಭಾಗ 1 ರ ಟೀಸರ್ ಬಿಡುಗಡೆಯಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು. ಮಣಿರತ್ನಂ ಬರೆದು ನಿರ್ದೇಶಿಸಿದ ಎರಡು ಭಾಗಗಳ ಚಿತ್ರದಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸಿದ್ದಾರೆ.

 

 

Share Post