CinemaPolitics

ನನಗೂ ರಾಜಕೀಯಕ್ಕೂ ಸಂಬಂಧ ಇಲ್ಲ: ಸೋನು ಸೂದ್

ಮುಂಬೈ: ಸೋನು ಸೂದ್‌ ಸಹೋದರಿ ಮಾಳವಿಕಾ ಸೂದ್‌ ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ಸೇರಿದ್ರು. ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ‌ ಕೂಡ ಅವರು ಕಣಕ್ಕಿಳಿಯಲಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್‌ ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಚುನಾವಣೆಯಲ್ಲಿ ನಾನು ನನ್ನ ಸಹೋದರಿ ಪರ ಪ್ರಚಾರ ಮಾಡುವುದಿಲ್ಲ ಎಂದು ಬೇಷರತ್ತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯಕೆ ಪಾದಾರ್ಪಣೆ ಮಾಡಿದ ನನ್ನ ತಂಗಿ ಬಗ್ಗೆ ನನಗೆ ಹೆಮ್ಮೆ ಇದೆ. ರಾಜಕೀಯ ಆಕೆಯ ಕನಸು. ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಯಾಕಂದ್ರೆ ಜನರ ಕಷ್ಟಗಳನ್ನು ಅರಿತು ಅವರಿಗೆ ನೆರವಾಗುವ ಬಯಕೆ ನನ್ನ ತಂಗಿಗಿದೆ. ಅದು ಅವಳ ವೈಯಕ್ತಿಕ ನಿರ್ಧಾರ ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಸೋನು ಸೂದ್‌ ತಿಳಿಸಿದ್ದಾರೆ.

ಸೋನು ಸೂದ್‌ ಪ್ರಸ್ತುತ ಬಡವರ, ಅಸಹಾಯಕರ ಬಂಧುವಾಗಿದ್ದಾರೆ. ಕೊರೊನಾ ಶುರುವಾದಗಿನಿಂದ ಇಲ್ಲಿವರೆಗೆ ನಾಣಾ ರೀತಿಯ ಸಾಮಾಜಿಕ ಕಳಕಳಿ ಕೆಲಸಗಳನ್ನು ಮಾಡಿದ್ದಾರೆ. ಫೌಂಡೇಶನ್‌ ಸ್ಥಾಪನೆ ಮಾಡಿ ಸಾವಿರಾರು ಜನರಿಗೆ ಅಗತ್ಯ ನೆರವನ್ನು ಮಾಡುವ ಕೆಲಸ ಮಾಡಿ ನಿಜವಾದ ಹೀರೋ ಎಂಬ ಖ್ಯಾತಿ ಗಳಿಸಿದ್ದಾರೆ. ಇದೆಲ್ಲಾ ರಾಜಕೀಯ ಗಿಮಿಕ್‌ ಎಂದು ಕೆಲವರು ಟೀಕೆ ಕೂಡ ಮಾಡಿದ್ರು. ಅದರ ಬೆನ್ನಲ್ಲೇ ಸೋನು ಸೂದ್‌ ತಂಗಿ ಕಾಂಗ್ರೆಸ್‌ ಸೇರಿದ್ದು ಅವರ ಟೀಕೆಗೆ ಮತ್ತಷ್ಟು ಪುಷ್ಟಿ ಕೊಡುವಂತೆ ಇತ್ತು. ಇದಕ್ಕೆಲ್ಲಾ ಸೋನು ಸೂದ್‌ ತೆರೆ ಎಳೆದಿದ್ದಾರೆ. ಯಾವುದೇ ಪಕ್ಷಕ್ಕೂ ನನಗೂ ಸಂಬಂಧ ಇಲ್ಲ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Share Post