ದುಡ್ಡಿಗಾಗಿ ದೇಹ ಹಂಚಿಕೊಳ್ಳುವವಳು ಎಂದಿದ್ದರು; ನಟಿ ರಿಯಾ ಚಕ್ರವರ್ತಿ
ಮುಂಬೈ; ನನ್ನನ್ನು ಗೋಲ್ಡ್ ಡಿಗ್ಗರ್ ಎಂದು ಎಲ್ಲರೂ ಕರೆದಿದ್ದರು. ಗೋಲ್ಡ್ ಡಿಗ್ಗರ್ ಎಂದರೆ ದುಡ್ಡಿಗಾಗಿ ಹಂಚಿಕೊಳ್ಳುವವಳು ಎಂದು ಎಂದರ್ಥ ಎಂದು ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದಾಗಿ ನನ್ನ ಮೇಲೆ ಅಪವಾದ ಬಂದಿತ್ತು. ಇದರಿಂದ ಏನೆಲ್ಲಾ ನೋವು ಅನುಭವಿಸಿದೆ ಎಂಬುದನ್ನು ಕಾರ್ಯಕ್ರಮದಲ್ಲಿ ರಿಯಾ ಚಕ್ರವರ್ತಿ ಹೇಳಿಕೊಂಡಿದ್ದಾರೆ.
ನಾನು ಸುಶಾಂತ್ ಸಿಂಗ್‌ರನ್ನು ಪ್ರೀತಿಸುತ್ತಿದ್ದೆ ಎಂಬ ಒಂದೇ ಒಂದು ಕಾರಣಕ್ಕೆ ನನ್ನ ವಿರುದ್ಧ ಆರೋಪ ಮಾಡಲಾಯಿತು. ಇದರಿಂದಾಗಿ ನಾನು ಪಡಬಾರದ ಕಷ್ಟಪಟ್ಟೆ. ಸುಶಾಂತ್ ಪೋಷಕರು ಕೂಡಾ ನನ್ನ ವಿರುದ್ಧ ಕೇಸ್ ದಾಖಲಿಸಿದ್ದರು. ಇದರಿಂದ ನಾನು ಜೈಲಿಗೂ ಹೋಗಬೇಕಾಯಿತು. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರಿಂದ ನಾನು ಸಾಕಷ್ಟು ನೋವು ಅನುಭವಿಸಬೇಕಾಯಿತು. ನಾನು ಏನು ಅನ್ನೋದು ಸುಶಾಂತ್‌ಗೆ ಮಾತ್ರ ಗೊತ್ತಿತ್ತು. ಅವರು ಈಗಲೂ ನನ್ನೊಂದಿಗಿದ್ದಾರೆ ಎಂದು ರಿಯಾ ಚಕ್ರವರ್ತಿ ಭಾವುಕರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ತಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಕೆಲವರು ಇದು ಕೊಲೆ ಎಂದರೆ, ಕೆಲವರು ಆತ್ಮಹತ್ಯೆ ಎಂದು ಹೇಳಿದ್ದರು.