Cinema

ನನ್ನ ಮೇಲೆ ಬಹಳ ನಂಬಿಕೆ ಇಟ್ಟಿದ್ದೀಯ..ಅದಕ್ಕೆ ನಾನು ಚಿರರುಣಿ-ಸಮಂತಾ ಭಾವನಾತ್ಮಕ ಪೋಸ್ಟ್

ಟಾಲಿವುಡ್:‌  ಸಮಂತಾ ಮತ್ತು ನಂದಿನಿ ರೆಡ್ಡಿ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತು. ಅವರಿಬ್ಬರು ಸುಮಾರು 10 ವರ್ಷಗಳಿಂದ ಒಬ್ಬರನ್ನೊಬ್ಬರು ತೀರಾ ಹತ್ತಿರದಿಂದ ಬಲ್ಲವರರಾಗಿದ್ದಾರೆ. ಇಬ್ಬರೂ ಸೇರಿ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಮಾಡಿದ್ದಾರೆ. ಸಮಂತಾ ಅಭಿನಯದ ಜಬರ್ದಸ್ತ್ ಮತ್ತು ಓ ಬೇಬಿ ಚಿತ್ರಗಳ ನಿರ್ದೇಶಕಿ ನಂದಿನಿ ರೆಡ್ಡಿ. ಇತ್ತೀಚೆಗೆ ನಡೆದ ಸಮಂತಾ ನಿರೂಪಕಿಯಾಗಿ ಮಾಡಿದ ‘ಸ್ಯಾಂ ಜಾಮ್’ ಕಾರ್ಯಕ್ರಮದ ನಿರ್ದೇಶಕಿಯೂ ಆಗಿದ್ದಾರೆ. ಸಮಂತಾ ಮಾಡಿದ ಕೆಲವು ಜಾಹೀರಾತುಗಳನ್ನೂ ನಂದಿನಿ ನಿರ್ದೇಶಿಸಿದ್ದಾರೆ. ಇಬ್ಬರೂ ಒಟ್ಟಿಗೆ ಪಾರ್ಟಿಗಳಿಗೆ ಹೋಗುತ್ತಾರೆ. ಸಮಂತಾ ಬೆಸ್ಟ್ ಫ್ರೆಂಡ್ಸ್ ಲಿಸ್ಟ್ನಲ್ಲಿ ನಂದಿನಿ ರೆಡ್ಡಿ ಮುಂದಿದ್ದಾರೆ. ನಿನ್ನೆ ನಂದಿನಿ ರೆಡ್ಡಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

ನಂದಿನಿ ರೆಡ್ಡಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, ”ಹುಟ್ಟುಹಬ್ಬದ ಶುಭಾಶಯಗಳು ನನ್ನ ಆತ್ಮೀಯ ಗೆಳತಿ. ನಿಮ್ಮ ಒಳ್ಳೆಯತನವೇ ನಿಮ್ಮ ಹಿರಿಮೆ. ನೀವು ನನಗೆ ಸ್ಫೂರ್ತಿ. ಅದು 2012ನೇ ಇಸವಿ ಅಂತ ಇನ್ನೂ ನೆನಪಿದೆ. ಆಗ ನನ್ನ ಪರಿಸ್ಥಿತಿ ಅಷ್ಟು ಚೆನ್ನಗಿರಲಿಲ್ಲ, ನನ್ನ ಆತ್ಮವಿಶ್ವಾಸ ತುಂಬಾ ಕಡಿಮೆಯಾಗಿತ್ತು. ನನಗೆ ಕೆಲಸ ಮಾಡಲು ಕೂಡ ಇಷ್ಟವಿರಲಿಲ್ಲ. ಅಂತಹ ಸಮಯದಲ್ಲಿ ನೀವು ಪ್ರತಿದಿನ ಬಂದು ನನ್ನನ್ನು ಭೇಟಿಯಾಗಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ಕಾರಣ ಇಂದು ನಾನು ಈ ಸ್ಥಾನದಲ್ಲಿದ್ದೇನೆ. ನಿಮ್ಮ ಬಿಡುವಿಲ್ಲದ ಸಮಯದಲ್ಲಿಯೂ ನೀವು ನನಗಾಗಿ ಸಮಯವನ್ನು ಮೀಸಲಿಟ್ಟಿದ್ದೀರಿ. ನನ್ನ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೂ ನೀವು ನನ್ನ ಜೊತೆಗಿದ್ದೀರಿ ಎಂದು ಬರೆದುಕೊಂಡಿದ್ದಾರೆ.

“ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಇರಲು ಪ್ರತಿದಿನ ನೀವು ನನಗೆ ಬೆಂಬಲ ನೀಡುತ್ತಲೇ ಇದ್ದೀರಿ.  ನಿಮಗೆ ನನ್ನ ಮೇಲೆ ತುಂಬಾ ನಂಬಿಕೆ.  ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮುಂದಿನ ಜೀವನ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ ಸಮಂತಾ.

 

Share Post