BengaluruCinema

ನಾಳೆ ಕಬ್ಜ ಟ್ರೇಲರ್‌ ರಿಲೀಸ್‌; ಬಣ್ಣ ಹಚ್ಚಿದ್ದಾರೆ ಹ್ಯಾಟ್ರಿಕ್‌ ಹೀರೋ ಶಿವಣ್ಣ

ಬೆಂಗಳೂರು; ಇತ್ತೀಚೆಗಷ್ಟೇ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಹಾಡೊಂದನ್ನು ರಿಲೀಸ್‌ ಮಾಡಲಾಗಿತ್ತು. ಇದೀಗ ನಾಳೆ ಚಿತ್ರದ ಟ್ರೇಲರ್‌ ರಿಲೀಸ್‌ ಆಗುತ್ತಿದೆ. ಬ್ರೇಕಿಂಗ್‌ ಸುದ್ದಿ ಏನು ಅಂದ್ರೆ ಶಿವರಾಜ್‌ ಕುಮಾರ್‌ ಈ ಚಿತ್ರದಲ್ಲಿ ನಟಿಸಿರೋದು. ಹೌದು, ಚಂದ್ರ ನಿರ್ದೇಶನದ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್‌ ಕೂಡಾ ಇದ್ದಾರೆ ಎಂಬ ಮಾತುಗಳ ಕೇಳಿಬಂದಿದ್ದವು. ಆದ್ರೆ ಆ ಬಗ್ಗೆ ಕನ್ಫರ್ಮ್‌ ಆಗಿರಲಿಲ್ಲ. ಆದ್ರೆ ನಿರ್ದೇಶಕ ಆರ್‌.ಚಂದ್ರ ಅವರೇ ಪೋಸ್ಟರ್‌ ಒಂದನ್ನು ರಿಲೀಸ್‌ ಮಾಡಿದ್ದು, ಅದ್ರಲ್ಲಿ ಶಿವರಾಜ್‌ ಕುಮಾರ್‌ ಇದ್ದಾರೆ. ಹೀಗಾಗಿ ಕಬ್ಜ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ನಟನೆ ಮಾಡಿರೋದು ಖಾತ್ರಿಯಾಗಿದೆ.

ನಾಳೆ ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲ ಭಾಷೆಗಳಲ್ಲೂ ಟ್ರೇಲರ್‌ ಹೊರಬರಲಿದೆ ಎಂದು ತಿಳಿದುಬಂದಿವೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Share Post